-->
Live In Relation | ವಯಸ್ಕರ ಸಹಜೀವನ ಅಕ್ರಮವಲ್ಲ: ಅಪ್ರಾಪ್ತರಿಗೂ ಜೀವಿಸುವ ಹಕ್ಕಿದೆ- ಹೈಕೋರ್ಟ್‌

Live In Relation | ವಯಸ್ಕರ ಸಹಜೀವನ ಅಕ್ರಮವಲ್ಲ: ಅಪ್ರಾಪ್ತರಿಗೂ ಜೀವಿಸುವ ಹಕ್ಕಿದೆ- ಹೈಕೋರ್ಟ್‌

ವಯಸ್ಕರ ಸಹಜೀವನ ಅಕ್ರಮವಲ್ಲ: ಅಪ್ರಾಪ್ತರಿಗೂ ಜೀವಿಸುವ ಹಕ್ಕಿದೆ- ಹೈಕೋರ್ಟ್‌





ಪ್ರಾಪ್ತ ವಯಸ್ಕರು ಪರಸ್ಪರ ಸಹಜೀವನ ನಡೆಸುವ ಹಕ್ಕು ಇದ್ದು, ಪ್ರಾಪ್ತ ವಯಸ್ಕರ ಸಹಜೀವನ ಅಕ್ರಮವಲ್ಲ. ಅದೇ ರೀತಿ, ಅಪ್ರಾಪ್ತರಿಗೂ ಜೀವಿಸುವ ಹಕ್ಕಿದೆ, ಸಹಜೀವನದ ಸಂಬಂಧ ಹೊಂದಲು ಮದುವೆ ವಯಸ್ಸಿಗೆ ಬಾರದ ಪ್ರಾಪ್ತ ವಯಸ್ಕರೂ ಅರ್ಹರು ಎಂದು ರಾಜಸ್ತಾನ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


ರಾಜಸ್ತಾನದ ಕೋಟಾ ಜಿಲ್ಲೆಯ 18 ವರ್ಷ ವಯಸ್ಸಿನ ಯುವತಿ ಮತ್ತು 19ರ ವಯಸ್ಸಿನ ಯುವಕ ರಕ್ಷಣೆಗೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ರಾಜಸ್ತಾನ ಹೈಕೋರ್ಟ್‌ನ ನ್ಯಾಯಮೂರ್ತಿ ಅನೂಪ್ ದಂಡ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.


ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರು ತಾವು 2025ರ ಅಕ್ಟೋಬರ್ 27ರಂದು ಸಹಜೀವನ ಕುರಿತು ಒಪ್ಪಂದ ಮಾಡಿಕೊಂಡಿದ್ದೇವೆ ನ್ಯಾಯಪೀಠದ ಗಮನಕ್ಕೆ ತಂದರು.


'ನಮ್ಮ ಸಹಜೀವನದ ಸಂಬಂಧವನ್ನು ವಿರೋಧಿಸುತ್ತಿರುವ ಯುವತಿಯ ಕುಟುಂಬದವರು, ನಮ್ಮನ್ನು ಕೊಲ್ಲುವ ಬೆದರಿಕೆ ಹಾಕಿದ್ದಾರೆ. ರಕ್ಷಣೆ ಕೋರಿ ಕೋಟಾ ಪೊಲೀಸರಿಗೆ ನೀಡಿದ ದೂರನ್ನು ಅವರು ಪರಿಗಣಿಸಿಲ್ಲ' ಎಂದು ಅರ್ಜಿದಾರರು ಆರೋಪಿಸಿದರು.


'ಕಾನೂನಿನಡಿ ಸಹಜೀವನದ ಸಂಬಂಧಗಳನ್ನು ನಿಷೇಧಿಸಲಾಗಿಲ್ಲ ಅಥವಾ ಅಪರಾಧ ಎಂದೂ ಪರಿಗಣಿಸಿಲ್ಲ. ಹೀಗಾಗಿ ಪ್ರತಿಯೊಬ್ಬರ ಜೀವನ ಮತ್ತು ಸ್ವಾತಂತ್ರ್ಯವನ್ನು ಕಾಪಾಡುವುದು ರಾಜ್ಯದ ಕರ್ತವ್ಯ' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ್ದು, ಅರ್ಜಿದಾರರ ರಕ್ಷಣೆಯನ್ನು ಖಚಿತಪಡಿಸಿ-ಕೊಳ್ಳುವಂತೆ ಜೋಧ್‌‌ಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದೆ.


'ಯುವಕನಿಗೆ 21 ವರ್ಷ ವಯಸ್ಸಾಗಿಲ್ಲ. ಅಂದರೆ ವಿವಾಹವಾಗುವ ಕಾನೂನುಬದ್ಧ ವಯಸ್ಸಾಗಿಲ್ಲ. ಹೀಗಾಗಿ ಅವರಿಗೆ ಸಹಜೀವನ ವ್ಯವಸ್ಥೆಯಲ್ಲಿ ಇರಲು ಅವಕಾಶ ನೀಡಬಾರದು' ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, “ಅರ್ಜಿದಾರರು ವಿವಾಹವಾಗುವ ವಯಸ್ಸಿಗೆ ಬಂದಿಲ್ಲ ಎಂಬ ಕಾರಣಕ್ಕೆ, ಅವರಿಗೆ ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ನಿರಾಕರಿಸಲು ಆಗುವುದಿಲ್ಲ" ಎಂದು ಸ್ಪಷ್ಟಪಡಿಸಿತು.


ಇಚ್ಛೆಯಿಂದ ಒಟ್ಟಿಗೆ ವಾಸಿಸುತ್ತಿರುವ ಜೋಡಿಗೆ ವಿವಾಹವಾಗಲು ಕಾನೂನುಬದ್ಧ ವಯಸ್ಸು ಆಗದಿದ್ದರೂ ಇಬ್ಬರು ವಯಸ್ಕರು ಸಹಜೀವನದ ಸಂಬಂಧ ಹೊಂದಲು ಅರ್ಹರು ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿದೆ.


Ads on article

Advertise in articles 1

advertising articles 2

Advertise under the article