ಸಹಕಾರಿ ಸಂಘದ ಉಪ ನಿಬಂಧಕರು ಸಂಘದ ಚುನಾವಣೆಯ ಸಿಂಧುತ್ವವನ್ನು ತೀರ್ಮಾನಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಸಹಕಾರಿ ಸಂಘದ ಉಪ ನಿಬಂಧಕರು ಸಂಘದ ಚುನಾವಣೆಯ ಸಿಂಧುತ್ವವನ್ನು ತೀರ್ಮಾನಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಸಹಕಾರಿ ಸಂಘಗಳ ಉಪ ನಿಬಂಧಕರು ಸಂಘದ ಚುನಾವಣೆಯ ಸಿಂಧುತ್ವವನ್ನು ತೀರ್ಮಾನಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಸುಭಾಶ್ ವಿದ್ಯಾರ್ಥಿ ಅವರಿದ್ದ ಲಕ್ನೋ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಹಕಾರ ಸಂಘಗಳ ನೋಂದಣಿ ಕಾಯ್ದೆಯ ಸೆಕ್ಷನ್ 25ರ ಪ್ರಕಾರ ಉಪ ನಿಬಂಧಕರಿಗೆ ಚುನಾವಣೆಯ ಔಚಿತ್ಯವನ್ನು ತೀರ್ಮಾನಿಸುವ ಅಧಿಕಾರವಿಲ್ಲ. ಚುನಾವಣೆ ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ಕಂಡುಬಂದತೆ ಸೂಕ್ತ ಪ್ರಾಧಿಕಾರಕ್ಕೆ ಚುನಾವಣೆಯ ಸಿಂಧುತ್ವವನ್ನು ನಿರ್ಧರಿಸುವಂತೆ ಶಿಫಾರಸ್ಸು ಮಾಡಬಹುದು ಎಂದು ನ್ಯಾಯಪೀಠ ಹೇಳಿದೆ.
ಸದ್ರಿ ಪ್ರಕರಣದಲ್ಲಿ ಸಹಕಾರಿ ಸಂಘಗಳ ಉಪ ನಿಬಂಧಕರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಚುನಾವಣೆಯ ಸಿಂಧುತ್ವದ ಬಗ್ಗೆ ಆದೇಶ ಹೊರಡಿಸಿದ್ದಾರೆ ಎಂದು ಗಮನಿಸಿದ ನ್ಯಾಯಪೀಠ, ರಿಟ್ ಅರ್ಜಿಯನ್ನು ಪುರಸ್ಕರಿಸಿದೆ.
ಚುನಾವಣೆಯ ಸಿಂಧುತ್ವದ ಬಗ್ಗೆ ಸೂಕ್ತ ಪ್ರಾಧಿಕಾರಕ್ಕೆ ಶಿಫಾರಸು ಮಾಡುವಂತೆ ಪ್ರತಿವಾದಿ ಉಪ ನಿಬಂಧಕರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ. ಚುನಾವಣೆಯ ಸಿಂಧುತ್ವದ ಬಗ್ಗೆ ನ್ಯಾಯತೀರ್ಮಾನ ಆಗುವವರೆಗೆ ಆಡಳಿತ ಮಂಡಳಿ ಸಂಘದ ಹಿತಾಸಕ್ತಿಗೆ ಧಕ್ಕೆ ಬರದಂತೆ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳಬಹುದಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ಆರ್ಯ ಪ್ರತಿನಿಧಿ ಸಭಾ ವಿರುದ್ಧ ಉತ್ತರ ಪ್ರದೇಶ ಸರ್ಕಾರ
ಅಲಹಾಬಾದ್ ಹೈಕೋರ್ಟ್, ರಿಟ್ ಅರ್ಜಿ 12312/2025 Dated 19-12-2025