-->
ಬರ್ತ್ ಸರ್ಟಿಫಿಕೇಟ್‌ ಬಗ್ಗೆ ಮಹತ್ವದ ಮಾಹಿತಿ: ಭಾರತೀಯ ನಾಗರಿಕರು ಜನನ ಪ್ರಮಾಣ ಪತ್ರ ಹೊಂದುವುದು ಕಡ್ಡಾಯವೇ?

ಬರ್ತ್ ಸರ್ಟಿಫಿಕೇಟ್‌ ಬಗ್ಗೆ ಮಹತ್ವದ ಮಾಹಿತಿ: ಭಾರತೀಯ ನಾಗರಿಕರು ಜನನ ಪ್ರಮಾಣ ಪತ್ರ ಹೊಂದುವುದು ಕಡ್ಡಾಯವೇ?

ಬರ್ತ್ ಸರ್ಟಿಫಿಕೇಟ್‌ ಬಗ್ಗೆ ಮಹತ್ವದ ಮಾಹಿತಿ: ಭಾರತೀಯ ನಾಗರಿಕರು ಜನನ ಪ್ರಮಾಣ ಪತ್ರ ಹೊಂದುವುದು ಕಡ್ಡಾಯವೇ?





ಭಾರತೀಯ ನಾಗರಿಕರು ಜನನ ಪ್ರಮಾಣ ಹೊಂದುವುದು ಕಡ್ಡಾಯವಾಗಿದೆ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.


ಭಾರತದಲ್ಲಿ 2023ರ ಅಕ್ಟೋಬರ್ 1ರಂದು ಅಥವಾ ನಂತರ ಜನಿಸಿದ ವ್ಯಕ್ತಿಗಳ ಜನ್ಮ ದಿನಾಂಕ ಮತ್ತು ಜನ್ಮ ಸ್ಥಳದ ಪ್ರಮಾಣವಾಗಿ ಜನನ ಪ್ರಮಾಣಪತ್ರವನ್ನು ಏಕೈಕ ದಾಖಲೆಯಾಗಿ ಬಳಸುವುದು ಕಡ್ಡಾಯಗೊಳಿಸಲಾಗಿದೆ. ವಿವಿಧ ಅಧಿಕೃತ ಸೇವೆಗಳಿಗಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ.


ಈ ಬದಲಾವಣೆ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಅಧಿನಿಯಮ, 2023ರ ಪರಿಣಾಮವಾಗಿದ್ದು, ಇದು 2023ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ. ಈ ಅಧಿನಿಯಮದ ಮುಖ್ಯ ಉದ್ದೇಶ ರಾಷ್ಟ್ರಮಟ್ಟದ ಜನನ ಮತ್ತು ಮರಣಗಳ ಡೇಟಾಬೇಸ್ ರಚಿಸುವುದು ಹಾಗೂ ವಿವಿಧ ಸರ್ಕಾರಿ ಸೇವೆಗಳ ದಾಖಲೆ ಪ್ರಕ್ರಿಯೆಗಳನ್ನು ಸರಳೀಕರಿಸುವುದಾಗಿದೆ.


*ಜನನ ಪ್ರಮಾಣಪತ್ರ ಕಡ್ಡಾಯವಾಗಿರುವ ಸೇವೆಗಳು*


ನಿಗದಿತ ದಿನಾಂಕದ ನಂತರ ಅಂದರೆ ದಿನಾಂಕ 1.10.2023 ರ ನಂತರ ಜನಿಸಿದವರಿಗಾಗಿ ಕೆಳಕಂಡ ಉದ್ದೇಶಗಳಿಗೆ ಜನನ ಪ್ರಮಾಣಪತ್ರವೇ ಏಕೈಕ ಮಾನ್ಯ ದಾಖಲೆ ಆಗಿರುತ್ತದೆ:


*ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ


*ಚಾಲನಾ ಪರವಾನಗಿ ನೀಡಿಕೆ


*ಮತದಾರರ ಪಟ್ಟಿ ತಯಾರಿ


*ವಿವಾಹ ನೋಂದಣಿ


*ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗಗಳಿಗೆ ನೇಮಕ


*ಪಾಸ್‌ಪೋರ್ಟ್ ನೀಡಿಕೆ


*ಆಧಾರ್ ಸಂಖ್ಯೆ ನೀಡಿಕೆ


*ಕೇಂದ್ರ ಸರ್ಕಾರ ನಿಗದಿಪಡಿಸುವ ಇತರೆ ಯಾವುದೇ ಉದ್ದೇಶಗಳು



Ads on article

Advertise in articles 1

advertising articles 2

Advertise under the article