ಫೇಸ್‌ಬುಕ್‌ನಲ್ಲಿ ಅಕ್ಷೇಪಾರ್ಹ ಕಮೆಂಟ್: ಖಜಾನೆ ಅಧಿಕಾರಿ ಕೆ.ಎಸ್. ನಟರಾಜ್ ವಿರುದ್ಧ ದೂರು ದಾಖಲು
ಫೇಸ್‌ಬುಕ್‌ನಲ್ಲಿ ಅಕ್ಷೇಪಾರ್ಹ ಕಮೆಂಟ್: ಖಜಾನೆ ಅಧಿಕಾರಿ ಕೆ.ಎಸ್. ನಟರಾಜ್ ವಿರುದ್ಧ ದೂರು ದಾಖಲು
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಕ್ಷೇಪಾರ್ಹ ಕಮೆಂಟ್ ಹಾಕಿರುವ ಸರ್ಕಾರಿ ಅಧಿಕಾರಿಯೊಬ್ಬರಿಗೆ ಗ್ರಹಚಾರ ಎದುರಾಗಿದೆ.
ಖಜಾನೆ ಅಧಿಕಾರಿ ಕೆ.ಎಸ್. ನಟರಾಜ್ ವಿರುದ್ಧ ದೂರು ದಾಖಲಾಗಿದ್ದು, ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ವಿಚಾರವಾದಿ ಡಾ. ನರೇಂದ್ರ ನಾಯಕ್ ಅವರು ದೂರು ದಾಖಲಿಸಿದ್ದಾರೆ.
ಡಾ. ನರೇಂದ್ರ ನಾಯಕ್ ಅವರ ಕುರಿತು ಫೇಸ್ ಬುಕ್‌ನಲ್ಲಿ ಆಕ್ಷೇಪಾರ್ಹ ಹಾಗೂ ನಿಂದನಾತ್ಮಕ ವಿಚಾರ ಮತ್ತು ಅಭಿವ್ಯಕ್ತಿಯುಳ್ಳ ವೀಡಿಯೋವನ್ನು ಪ್ರೊ. ಪವಿತ್ರಾ ಕಾಂಚನ್ ಎಂಬ ನಕಲಿ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವೀಡಿಯೋ ಲಿಂಕ್‌ನ್ನು ಲಕ್ಷಾಂತರ ಜನರ ವೀಕ್ಷಣೆ ಮಾಡಿದ್ದಾರೆ.
ಈ ವೀಡಿಯೋ ಪೋಸ್ಟ್‌ಗೆ ಹಲವು ಕಮೆಂಟ್‌ಗಳು ಬಂದಿದ್ದು, ಈ ಪೈಕಿ ಖಜಾನೆ ಅಧಿಕಾರಿ ಕೆ.ಎಸ್. ನಟರಾಜ್ ಅವರದ್ದೂ ಒಂದಾಗಿದೆ.
ಪ್ರೊ. ನರೇಂದ್ರ ನಾಯಕ್ ಅವರು ಈ ವೀಡಿಯೋ, ದಾಖಲೆಗಳನ್ನು ಲಿಂಕ್ ಸಹಿತ ಪೊಲೀಸರಿಗೆ ನೀಡಿದ್ದು, ಕ್ರಮ ಕೈಗೊಳ್ಳುವಂತೆ ಪೊಲಿಸರನ್ನು ಕೋರಿದ್ದಾರೆ.