-->
ಕಾವೇರಿ ತಂತ್ರಾಂಶ ದುರುಪಯೋಗ ಮಾಡಿ ನೋಂದಣಿ ಅಕ್ರಮ: ರವಿ ಸಂಕನಗೌಡ ಸಹಿತ ಐವರು ಉಪ ನೋಂದಣಾಧಿಕಾರಿಗಳ ಅಮಾನತು

ಕಾವೇರಿ ತಂತ್ರಾಂಶ ದುರುಪಯೋಗ ಮಾಡಿ ನೋಂದಣಿ ಅಕ್ರಮ: ರವಿ ಸಂಕನಗೌಡ ಸಹಿತ ಐವರು ಉಪ ನೋಂದಣಾಧಿಕಾರಿಗಳ ಅಮಾನತು

ಕಾವೇರಿ ತಂತ್ರಾಂಶ ದುರುಪಯೋಗ ಮಾಡಿ ನೋಂದಣಿ ಅಕ್ರಮ: ರವಿ ಸಂಕನಗೌಡ ಸಹಿತ ಐವರು ಉಪ ನೋಂದಣಾಧಿಕಾರಿಗಳ ಅಮಾನತು





ಕಾವೇರಿ ತಂತ್ರಾಂಶ ದುರುಪಯೋಗ ಮಾಡಿ ಅಕ್ರಮ ಎಸಗಿದ ಐವರು ಉಪ ನೋಂದಣಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ.


ಕಾವೇರಿ 2.0 ತಂತ್ರಾಂಶದಲ್ಲಿ ನೀಡಲಾಗಿರುವ ಕೆಲವು ವಿನಾಯಿತಿಗಳನ್ನು ದುರುಪಯೋಗ ಮಾಡಿಕೊಂಡು. ಕ್ರಯಪತ್ರಗಳನ್ನು ಅಕ್ರಮವಾಗಿ ನೋಂದಣಿ ಮಾಡಿದ್ದ ಸರ್ಜಾಪುರ ಉಪನೋಂದಣಾಧಿಕಾರಿ ರವಿಸಂಕನಗೌಡ ಅವರನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಮಾನತು ಮಾಡಿದೆ.


ರವಿಸಂಕನಗೌಡ ಅವರು ಕ್ರಯಪತ್ರಗಳನ್ನು ಅಕ್ರಮವಾಗಿ ನೋಂದಣಿ ಮಾಡುತ್ತಿರುವ ಬಗ್ಗೆ ಬಂದಿದ್ದ ದೂರುಗಳ ಆಧಾರದಲ್ಲಿ ಇಲಾಖೆಯು ತನಿಖೆಗೆ ಆದೇಶಿಸಿತ್ತು.


ನ್ಯಾಯಾಲಯದ ಆದೇಶ ಆಧಾರಿತ ನೋಂದಣಿ ವ್ಯವಸ್ಥೆಯಲ್ಲಿ, ಕೆಲವು ದಾಖಲೆಗಳನ್ನು ಅಪ್‌ಲೋಡ್ ಮಾಡಲು ಕಾವೇರಿ 2.0 ತಂತ್ರಾಂಶದಲ್ಲಿ ವಿನಾಯಿತಿ ನೀಡಲಾಗಿದೆ. ಆರೋಪಿ ರವಿಸಂಕನಗೌಡ ಅವರು ಈ ವಿನಾಯಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಹಲವು ಅಕ್ರಮ ದಾಖಲೆಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ.


ನ್ಯಾಯಾಲಯದ ಯಾವುದೇ ಆದೇಶ ಇಲ್ಲದಿದ್ದರೂ ಕಾವೇರಿ 2.0 ತಂತ್ರಾಂಶದಲ್ಲಿ, 'ನ್ಯಾಯಾಲಯದ ಆದೇಶದ ಆಧಾರದಲ್ಲಿ ನೋಂದಣಿ'ಯನ್ನು ಆಯ್ಕೆ ಮಾಡುತ್ತಿದ್ದರು. ಈ ಮೂಲಕ ಹಲವು ಅಕ್ರಮ ನೋಂದಣಿಗಳನ್ನು ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಇಲಾಖೆಯು ಅಮಾನತು ಆದೇಶದಲ್ಲಿ ವಿವರಿಸಿದೆ.


ಸರ್ಜಾಪುರ ನೋಂದಣಾಧಿಕಾರಿ ನಡೆದಿರಬಹುದಾದ ಉಪ ಕಚೇರಿಯಲ್ಲಿ ಈ ರೀತಿಯ ಅಕ್ರಮಗಳ ಸಮಗ್ರ ತನಿಖೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಆದೇಶ ಹೊರಡಿಸಿದೆ.


ಇನ್ನೂ ನಾಲ್ವರ ಅಮಾನತು


ಕ್ರಯಪತ್ರಗಳನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಸದರಿ ಸ್ವತ್ತಿಗೆ ಸಂಬಂಧಿಸಿದ ಇ-ಖಾತಾ ಮಾಹಿತಿಯನ್ನು ಇ-ಸ್ವತ್ತು ಪೋರ್ಟಲ್‌ನಿಂದ ಕಾವೇರಿ 2.0 ತಂತ್ರಾಂಶಕ್ಕೆ ವರ್ಗಾಯಿಸಬೇಕು. ಬಾಣಸವಾಡಿ, ವರ್ತೂರು ಮತ್ತು ಹಲಸೂರು ಉಪನೋಂದಣಾಧಿಕಾರಿ ಕಚೇರಿಗಳು ಈ ನಿಯಮವನ್ನು ಉಲ್ಲಂಘಿಸಿ ಹಲವು ಕ್ರಯಪತ್ರಗಳನ್ನು ನೋಂದಣಿ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.


ಐವರು ಉಪನೋಂದಣಾಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಒಬ್ಬರು ಈಗಾಗಲೇ ನಿವೃತ್ತರಾಗಿದ್ದಾರೆ. ಐವರ ಪೈಕಿ ಎನ್.ಸತೀಶ್ ಕುಮಾರ್, ಆರ್.ಪ್ರಭಾವತಿ, ಶ್ರೀಧರ್ ಮತ್ತು ಗಿರೀಶ್ ಚಂದ್ರ ಎಂಬುವವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಮಾಡಲಾಗಿದೆ.



Ads on article

Advertise in articles 1

advertising articles 2

Advertise under the article