ನಿಮ್ಮ ಡಿಎಲ್ ಅವಧಿ ಮುಗಿದಿದೆಯೇ..? ಇಲ್ಲಿದೆ ಮಹತ್ವದ ಮುನ್ಸೂಚನೆ: ಚಾಲನಾ ಪರವಾನಿಗೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನಿಮ್ಮ ಡಿಎಲ್ ಅವಧಿ ಮುಗಿದಿದೆಯೇ..? ಇಲ್ಲಿದೆ ಮಹತ್ವದ ಮುನ್ಸೂಚನೆ: ಚಾಲನಾ ಪರವಾನಿಗೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಚಾಲನಾ ಪರವಾನಿಗೆ ಅವಧಿ ಮುಗಿದ ತಕ್ಷಣ ಅಮಾನ್ಯವಾಗುತ್ತದೆ ಎಂದ ಸುಪ್ರೀಂಕೋರ್ಟ್ ತೀರ್ಪು
ಮೋಟಾರು ವಾಹನ ಕಾಯ್ದೆ, 2019ರ ತಿದ್ದುಪಡಿ ನಂತರ ಚಾಲನಾ ಪರವಾನಿಗೆಗೆ ಅವಧಿ ಮುಗಿದ ಬಳಿಕವೂ ಮಾನ್ಯವಾಗಿರುವ 30 ದಿನಗಳ ಗ್ರೇಸ್ ಪೀರಿಯಡ್ (ಸಡಿಲಾವಧಿ) ಇಲ್ಲ. ಪರವಾನಿಗೆ ಅವಧಿ ಮುಗಿದ ಕ್ಷಣದಿಂದಲೇ ಅದು ಅಮಾನ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಅಹ್ಸನುದ್ದೀನ್ ಅಮಾನುಲ್ಲಾ ಮತ್ತು ಎಸ್ ವಿ ಎನ್ ಭಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ತೀರ್ಪಿನ ಮುಖ್ಯ ವಿವರಗಳು:
ಗ್ರೇಸ್ ಪೀರಿಯಡ್ ರದ್ದುಪಡಿಕೆ:
ಮೋಟಾರು ವಾಹನಗಳು (ತಿದ್ದುಪಡಿ) ಕಾಯ್ದೆ, 2019ರ ಮೂಲಕ, ಹಿಂದೆ 30 ದಿನಗಳವರೆಗೆ ಅವಧಿ ಮುಗಿದರೂ ಪರವಾನಗಿ ಮಾನ್ಯವೆಂದು ಪರಿಗಣಿಸುವಂತೆ ಮಾಡಿದ್ದ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 14(2) ರಲ್ಲಿನ ಪ್ರಾವಿಸೊವನ್ನು ಸ್ಪಷ್ಟವಾಗಿ ಅಳಿಸಲಾಗಿದ್ದು (deleted), ಗ್ರೇಸ್ ಪೀರಿಯಡ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
ತಕ್ಷಣದ ಅಮಾನ್ಯತೆ:
ಸುಪ್ರೀಂ ಕೋರ್ಟ್, "Telangana State Level Police Recruitment Board v. Penjarla Vijay Kumar & Ors. (2025)" ಪ್ರಕರಣದಲ್ಲಿ, ಚಾಲನಾ ಪರವಾನಗಿ ಅವಧಿ ಮುಗಿದ ಮುಂದಿನ ದಿನದಿಂದಲೇ ಆ ವ್ಯಕ್ತಿ ಕಾನೂನುಬದ್ಧವಾಗಿ ವಾಹನ ಚಾಲನೆ ಮಾಡಲು ಅಯೋಗ್ಯನಾಗುತ್ತಾನೆ ಎಂದು ತೀರ್ಪು ನೀಡಿದೆ.
ಹಿಂದಿನ ದಿನಾಂಕದಿಂದ ಮಾನ್ಯತೆ ಇಲ್ಲ:
ಚಾಲನಾ ಪರವಾನಗಿಯನ್ನು ಅವಧಿ ಮುಗಿದ ನಂತರ ನವೀಕರಿಸಿದರೆ, ಆ ನವೀಕರಣವು ಮುಂದಿನ ದಿನಾಂಕದಿಂದ ಮಾತ್ರ (prospectively) ಜಾರಿಗೆ ಬರುತ್ತದೆ; ಅವಧಿ ಮುಗಿದ ದಿನಾಂಕದಿಂದ ಹಿಂದಕ್ಕೆ ಅನ್ವಯಿಸುವುದಿಲ್ಲ (retrospective validity ಇಲ್ಲ).
ಮಧ್ಯಂತರ ಅವಧಿಯನ್ನು ಕಾನೂನುಬದ್ಧ ಮಾನ್ಯತೆಯಲ್ಲಿನ ವ್ಯತ್ಯಯ (legal break) ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ನವೀಕರಣ ಅವಧಿ ಮತ್ತು ಮಾನ್ಯತೆ ನಡುವಿನ ವ್ಯತ್ಯಾಸ:
ತಿದ್ದುಪಡಿಯ ಮೂಲಕ, ಹೊಸ ಚಾಲನಾ ಪರೀಕ್ಷೆ ಬರೆಯುವ ಅಗತ್ಯ ತಪ್ಪಿಸಲು, ಪರವಾನಗಿ ಅವಧಿ ಮುಗಿಯುವ ಮೊದಲು ಅಥವಾ ನಂತರ ಒಂದು ವರ್ಷದೊಳಗೆ ನವೀಕರಣಕ್ಕೆ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ. ಆದರೆ, ಇದರರ್ಥ ಅವಧಿ ಮುಗಿದ ನಂತರ ಆ ಒಂದು ವರ್ಷದೊಳಗಿನ ಅವಧಿಯಲ್ಲಿ ಪರವಾನಗಿ ಮಾನ್ಯವಾಗಿರುತ್ತದೆ ಎಂಬುದಲ್ಲ. ಅವಧಿ ಮುಗಿದ ನಂತರ, ನವೀಕರಣವಾಗುವವರೆಗೂ ಪರವಾನಗಿ ಅಮಾನ್ಯವಾಗಿರುತ್ತದೆ.
ಒಟ್ಟಿನಲ್ಲಿ ಚಾಲನಾ ಪರವಾನಿಗೆ ನಿರಂತರವಾಗಿ ಕಾನೂನುಬದ್ಧವಾಗಿ ಮಾನ್ಯವಾಗಿರಲು, ಅದನ್ನು ಅವಧಿ ಮುಗಿಯುವ ಮೊದಲುಲೇ ನವೀಕರಿಸಬೇಕು. ಇಲ್ಲದಿದ್ದರೆ ದಂಡ, ಕಾನೂನು ಸಮಸ್ಯೆಗಳು ಹಾಗೂ ವಿಮಾ (insurance) ದಾವೆಗಳಿಗೆ ಸಂಬಂಧಿಸಿದ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ.
ಪ್ರಕರಣ: ತೆಲಂಗಾಣ ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿ ವಿರುದ್ಧ ಪೆಂಜಾರ್ಲ ವಿಜಯ ಕುಮಾರ್ ಮತ್ತಿತರರು
ಸುಪ್ರೀಂ ಕೋರ್ಟ್, ದಿನಾಂಕ 18-12-2025 (2025 INSC 1452 )