-->
ಟ್ರ್ಯಾಫಿಕ್ ರೂಲ್ ಉಲ್ಲಂಘನೆ: ಜಡ್ಜ್‌ ಎಂದು ಸುಳ್ಳು ಹೇಳಿದ ವಕೀಲರಿಗೆ ಬಾರ್‌ ಕೌನ್ಸಿಲ್ ನೋಟೀಸ್‌; ಶಿಸ್ತು ಸಮಿತಿ ಮುಂದೆ ಹಾಜರಾಗಲು ತಾಕೀತು

ಟ್ರ್ಯಾಫಿಕ್ ರೂಲ್ ಉಲ್ಲಂಘನೆ: ಜಡ್ಜ್‌ ಎಂದು ಸುಳ್ಳು ಹೇಳಿದ ವಕೀಲರಿಗೆ ಬಾರ್‌ ಕೌನ್ಸಿಲ್ ನೋಟೀಸ್‌; ಶಿಸ್ತು ಸಮಿತಿ ಮುಂದೆ ಹಾಜರಾಗಲು ತಾಕೀತು

ಟ್ರ್ಯಾಫಿಕ್ ರೂಲ್ ಉಲ್ಲಂಘನೆ: ಜಡ್ಜ್‌ ಎಂದು ಸುಳ್ಳು ಹೇಳಿದ ವಕೀಲರಿಗೆ ಬಾರ್‌ ಕೌನ್ಸಿಲ್ ನೋಟೀಸ್‌; ಶಿಸ್ತು ಸಮಿತಿ ಮುಂದೆ ಹಾಜರಾಗಲು ತಾಕೀತು





ವಕೀಲರೊಬ್ಬರು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ ಸಂದರ್ಭದಲ್ಲಿ ಬಚಾವಾಗಲು ತಾನೊಬ್ಬ ಜಡ್ಜ್‌ ಎಂದು ಸುಳ್ಳು ಹೇಳಿ ಸಂಕಷ್ಟವನ್ನು ಆಹ್ವಾನಿಸಿಕೊಂಡಿದ್ದಾರೆ. ತಾನೊಬ್ಬ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ಎಂದು ಸುಳ್ಳು ಹೇಳಿದ ವಕೀಲರಿಗೆ ಬಾರ್‌ ಕೌನ್ಸಿಲ್ ನೋಟೀಸ್‌ ಜಾರಿಗೊಳಿಸಿದ್ದು, ಶಿಸ್ತು ಸಮಿತಿ ಮುಂದೆ ಹಾಜರಾಗಲು ತಾಕೀತು ಮಾಡಲಾಗಿದೆ.


ಪಂಜಾಬ್ ಮತ್ತು ಹರಿಯಾಣ ವಕೀಲರ ಪರಿಷತ್ತು ನೋಟಿಸ್ ಜಾರಿ ಮಾಡಿದ್ದು, ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಬಿದ್ದ ವೇಳೆ ತಾನು ನ್ಯಾಯಾಧೀಶ (ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್) ಎಂದು ಹೇಳಿಕೊಂಡಿದ್ದ ವಕೀಲ ಪ್ರಕಾಶ್ ಸಿಂಗ್ ಎಂದು ತಿಳಿದುಬಂದಿದೆ.


ವಕೀಲರಿಗೆ ರಾಜ್ಯ ಬಾರ್ ಕೌನ್ಸಿಲ್ ನೋಟಿಸ್ ಜಾರಿ ಮಾಡಿದ್ದು, ಪರಿಷತ್ತಿನ ಶಿಸ್ತು ಸಮಿತಿ ಎಂದು ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ತಾಕೀತು ಮಾಡಲಾಗಿದೆ. ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗದೇ ಇದ್ದಲ್ಲಿ ಪ್ರಕರಣವನ್ನು ಏಕಪಕ್ಷೀಯ ಎಂದು ಘೋಷಿಲಾಗುವುದು ಎಂದು ಬಾರ್ ಕೌನ್ಸಿಲ್ ಎಚ್ಚರಿಕೆ ನೀಡಿದೆ.


ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಸಂದರ್ಭದಲ್ಲಿ ವಕೀಲ ಪ್ರಕಾಶ್ ಸಿಂಗ್ ಅವರನ್ನು ಪೊಲೀಸರು ತಡೆದಾಗ, "ನೀವೇಕೆ ನನ್ನನ್ನು ತಡೆದಿರಿ. ನಾನು ನಿಮಗೆ ಲೈಸೆನ್ಸ್ ತೋರಿಸುವುದಿಲ್ಲ. ಸಬ್ ಇನ್ಸಪೆಕ್ಟರ್ ಮಾತ್ರ ನನ್ನ ಲೈಸೆನ್ಸ್ ಕೇಳಬಹುದು" ಎಂದು ಪೊಲೀಸರಿಗೆ ತಿರುಗೇಟು ನೀಡಿದ್ದರು. ಅಲ್ಲದೆ, ತಾನೊಬ್ಬ ಜೆಎಂಎಫ್‌ಸಿ ಜಡ್ಜ್‌ (ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್) ಎಂದು ಪ್ರಕಾಶ್ ಸಿಂಗ್ ಎಂದು ಹೇಳಿಕೊಂಡಿದ್ದರು. ಗ್ರಹಚಾರಕ್ಕೆ ವಕೀಲರ ಈ ವಿಡಿಯೋ ವೈರಲ್ ಆಗಿದ್ದು, ತಕ್ಷಣ ಎಚ್ಚೆತ್ತುಕೊಂಡ ರಾಜ್ಯ ವಕೀಲರ ಪರಿಷತ್ತು ನೋಟಿಸ್ ಜಾರಿ ಮಾಡಿದೆ.


ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಡ ಪೊಲೀಸರು ವಕೀಲ ಪ್ರಕಾಶ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 170, 186 ಹಾಗು 419 ಅಡಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಸಿಂಗ್ ವಶಕ್ಕೆ ಪಡೆದು ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ವಿಧಿಸಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu