-->
ಬಡ್ಡಿ ಆಸೆಯಿಂದ ಬ್ಯಾಂಕಿನಲ್ಲಿ ಡೆಪಾಸಿಟ್ ಇಡುವುದು ವಾಣಿಜ್ಯ ವ್ಯವಹಾರವಲ್ಲ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಬಡ್ಡಿ ಆಸೆಯಿಂದ ಬ್ಯಾಂಕಿನಲ್ಲಿ ಡೆಪಾಸಿಟ್ ಇಡುವುದು ವಾಣಿಜ್ಯ ವ್ಯವಹಾರವಲ್ಲ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಬಡ್ಡಿ ಆಸೆಯಿಂದ ಬ್ಯಾಂಕಿನಲ್ಲಿ ಡೆಪಾಸಿಟ್ ಇಡುವುದು ವಾಣಿಜ್ಯ ವ್ಯವಹಾರವಲ್ಲ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು





ಬಡ್ಡಿ ಆಸೆಯಿಂದ ಬ್ಯಾಂಕಿನಲ್ಲಿ ಡೆಪಾಸಿಟ್ ಇಡುವುದು ವಾಣಿಜ್ಯ ವ್ಯವಹಾರವಲ್ಲ. ಬ್ಯಾಂಕ್ ಠೇವಣಿ ಮೇಲೆ ಬಡ್ಡಿ ಬಂದ ಕಾರಣಕ್ಕೆ ಅದು ‘ವಾಣಿಜ್ಯ ಉದ್ದೇಶ’ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಮನೋಜ್ ಮಿಶ್ರ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಬ್ಯಾಂಕ್ ಠೇವಣಿಗಳ ಮೇಲೆ ಬಡ್ಡಿ ಬಂದರೆ ಮಾತ್ರ ಆ ವ್ಯವಹಾರವನ್ನು “ವಾಣಿಜ್ಯ” ಎಂದು ಪರಿಗಣಿಸಲಾಗುವುದಿಲ್ಲ. ಒಬ್ಬ ವ್ಯಕ್ತಿಯನ್ನು “ಗ್ರಾಹಕ” ಎಂಬ ವ್ಯಾಖ್ಯಾನದಿಂದ ಹೊರಗಿಡಲು, ಆ ಠೇವಣಿಯು ಲಾಭ ಗಳಿಸುವ ಚಟುವಟಿಕೆಗೆ ನೇರ ಹಾಗೂ ಸಮೀಪ ಸಂಬಂಧ ಹೊಂದಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.


ಹೆಚ್ಚುವರಿ ನಿಧಿಗಳನ್ನು ಬ್ಯಾಂಕ್‌ನಲ್ಲಿ ಇಡುವುದು ಕೇವಲ ಬಡ್ಡಿ ದೊರೆಯುತ್ತದೆ ಎಂಬ ಕಾರಣಕ್ಕೆ ‘ವಾಣಿಜ್ಯ ಉದ್ದೇಶ’ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಆ ಠೇವಣಿಗಳನ್ನು ವ್ಯಾಪಾರ ವ್ಯವಹಾರಗಳಿಗೆ ಉಪಯೋಗಿಸಲು, ಸಾಲ ಸೌಲಭ್ಯ ಪಡೆಯಲು ಅಥವಾ ಇತರೆ ಬ್ಯಾಂಕಿಂಗ್ ಸೇವೆಗಳನ್ನು ಬಳಸಲು ಬಳಸಿದರೆ, ಅಂಥ ಸಂದರ್ಭಗಳಲ್ಲಿ ಅವುಗಳನ್ನು ‘ವಾಣಿಜ್ಯ ಉದ್ದೇಶ’ಕ್ಕೆ ಬಳಸಲಾಗಿದೆ ಎಂದು ಪರಿಗಣಿಸಬಹುದು.


“ಸಾಮಾನ್ಯವಾಗಿ, ಒಂದು ಕಂಪನಿ ತನ್ನ ಹೆಚ್ಚುವರಿ ನಿಧಿಗಳನ್ನು ಸುರಕ್ಷಿತವಾಗಿ ಇಡುವುದಕ್ಕಾಗಿ ಅಥವಾ ಕಾನೂನುಬದ್ಧ ನಿಯಮಗಳನ್ನು ಪಾಲಿಸಲು ಬ್ಯಾಂಕ್‌ನಲ್ಲಿ ಠೇವಣಿ ಇಡುವುದು ವಾಣಿಜ್ಯ ಉದ್ದೇಶವನ್ನು ತೋರಿಸುವುದಿಲ್ಲ. ಎಲ್ಲಾ ಬ್ಯಾಂಕ್ ಠೇವಣಿಗಳಿಗೆ ಸಾಮಾನ್ಯವಾಗಿ ಬಡ್ಡಿ ಸಿಗುತ್ತದೆ. ಆದ್ದರಿಂದ, ಕೇವಲ ಬಡ್ಡಿ ಬಂದ ಕಾರಣಕ್ಕೆ ಬ್ಯಾಂಕಿಂಗ್ ಸೇವೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗಿದೆ ಎಂದು ಹೇಳುವುದು ಸರಿಯಲ್ಲ. ಆದರೆ, ಸಾಲ ಸೌಲಭ್ಯ ಪಡೆಯಲು ಅಥವಾ ಇತರೆ ವ್ಯಾಪಾರ ಬಳಕೆಗಾಗಿ ಠೇವಣಿ ಇಟ್ಟಿದ್ದರೆ, ಅದನ್ನು ವಾಣಿಜ್ಯ ಉದ್ದೇಶವೆಂದು ಪರಿಗಣಿಸಬಹುದು.” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.


ಈ ಪ್ರಕರಣವು 2014ರಲ್ಲಿ 9 ಕೋಟಿ ರೂಪಾಯಿ ಮೌಲ್ಯದ ನಿರಖು ಠೇವಣಿ ಕುರಿತು ಸರ್ಕಾರದ ಸಂಸ್ಥೆ ಮತ್ತು ವಿಜಯಾ ಬ್ಯಾಂಕ್ ನಡುವೆ ಉಂಟಾದ ವಿವಾದದಿಂದ ಆರಂಭವಾಗಿದೆ.


ಅಪೀಲುದಾರ ಸಂಸ್ಥೆ ಆರೋಪಿಸಿದ್ದು, ಬ್ಯಾಂಕ್ ಅನಧಿಕೃತವಾಗಿ ಮೂರನೇ ವ್ಯಕ್ತಿಗೆ ಅದರ ಫಿಕ್ಸೆಡ್ ಡಿಪಾಜಿಟ್ ರಸೀದಿ (FDR) ವಿರುದ್ಧ ಓವರ್‌ಡ್ರಾಫ್ಟ್ ಸೌಲಭ್ಯ ನೀಡಿದೆ. ನಂತರ, ಆ ಓವರ್‌ಡ್ರಾಫ್ಟ್ ಮುಚ್ಚಲು ಫಿಕ್ಸ್ಡ್ ಡಿಪಾಜಿಟ್ ಮೊತ್ತವನ್ನು ಬಳಸಿಕೊಂಡು, ಕೇವಲ ₹50 ಲಕ್ಷದಷ್ಟು ಹಣವನ್ನು ಮಾತ್ರ ಸಂಸ್ಥೆಗೆ ಹಿಂತಿರುಗಿಸಿದೆ.


ಇದರಿಂದ ಅಸಮಾಧಾನಗೊಂಡ ಸಂಸ್ಥೆ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ (NCDRC) ಮುಂದೆ ದೂರು ಸಲ್ಲಿಸಿತು. ಆದರೆ, ಈ ವ್ಯವಹಾರವು ‘ವಾಣಿಜ್ಯ ಉದ್ದೇಶ’ಕ್ಕೆ ಸಂಬಂಧಿಸಿದೆ ಮತ್ತು ಮೋಸಕ್ಕೆ ಸಂಬಂಧಿಸಿದ ಸಂಕೀರ್ಣ ಪ್ರಶ್ನೆಗಳಿವೆ ಎಂಬ ಕಾರಣದಿಂದ ಆಯೋಗ ದೂರು ತಳ್ಳಿಹಾಕಿತು.


ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ (NCDRC) ನೀಡಿದ ಕಾರಣವನ್ನು ನ್ಯಾಯಪೀಠ ಸಂಪೂರ್ಣವಾಗಿ ಒಪ್ಪಲಿಲ್ಲ. ಕೇವಲ ಠೇವಣಿಗೆ ಬಡ್ಡಿ ಬಂದ ಕಾರಣಕ್ಕೆ ಅದನ್ನು ವಾಣಿಜ್ಯ ಚಟುವಟಿಕೆ ಎಂದು ಪರಿಗಣಿಸುವುದು ಸರಿಯಲ್ಲ ಎಂದು ನ್ಯಾಯಾಲಯ ತಿಳಿಸಿದೆ.


ನ್ಯಾಯಾಲಯವು “ಪ್ರಮುಖ ಉದ್ದೇಶ ಪರೀಕ್ಷೆ” (Dominant Purpose Test) ಅನ್ನು ಒತ್ತಿ ಹೇಳಿದ್ದು, ವ್ಯವಹಾರದ ಮೂಲ ಉದ್ದೇಶವೇನು ಎಂಬುದರ ಆಧಾರದ ಮೇಲೆ ಅದರ ಸ್ವಭಾವವನ್ನು ನಿರ್ಧರಿಸಬೇಕು ಎಂದಿದೆ.


“ವ್ಯವಹಾರದ ಪ್ರಮುಖ ಉದ್ದೇಶವು ಲಾಭ ಗಳಿಸುವುದಕ್ಕೆಯೇ ಎಂಬುದನ್ನು ನೋಡಬೇಕು. ವ್ಯವಹಾರವು ವೈಯಕ್ತಿಕ ಬಳಕೆ ಅಥವಾ ಉಪಯೋಗಕ್ಕಾಗಿ ಇದ್ದು, ಯಾವುದೇ ವಾಣಿಜ್ಯ ಚಟುವಟಿಕೆಗೆ ಸಂಬಂಧಿಸದಿದ್ದರೆ, ಅದು ಸ್ವಯಂ ಉದ್ಯೋಗದ ಮೂಲಕ ಜೀವನೋಪಾಯಕ್ಕೆ ಸಂಬಂಧಿಸಿದೆ ಎಂಬ ಪ್ರಶ್ನೆ ಬರುವುದಿಲ್ಲ. ಆದರೆ, ವ್ಯವಹಾರವು ವಾಣಿಜ್ಯ ಉದ್ದೇಶಕ್ಕೆ ಸಂಬಂಧಿಸಿದ್ದಾದರೆ, ಅದು ಸ್ವಯಂ ಉದ್ಯೋಗಕ್ಕಾಗಿ ಜೀವನೋಪಾಯ ಗಳಿಸಲು ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು.” ಎಂದು ನ್ಯಾಯಾಲಯ ಹೇಳಿದೆ.


ಆದಾಗ್ಯೂ, ಪ್ರಕರಣದಲ್ಲಿ ಮೋಸ, ಕೃತಕ ದಾಖಲೆ (forgery), ಹಾಗೂ ಅನಧಿಕೃತವಾಗಿ ಠೇವಣಿ ಗಿರವಿ ಇಡಲಾಗಿದೆ ಎಂಬಂತಹ ಗಂಭೀರ ಆರೋಪಗಳಿದ್ದರಿಂದ, ಇವುಗಳನ್ನು ಗ್ರಾಹಕ ನ್ಯಾಯಾಂಗದ ಸಂಕ್ಷಿಪ್ತ ವಿಚಾರಣೆಯಲ್ಲಿ ಸಮಗ್ರವಾಗಿ ಪರಿಶೀಲಿಸಲು ಸಾಧ್ಯವಿಲ್ಲ ಎಂಬ ಕಾರಣದಿಂದ NCDRC ದೂರು ತಳ್ಳಿಹಾಕಿರುವುದನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿದೆ.


ಅಪೀಲನ್ನು ತಳ್ಳಿಹಾಕಿದ ನ್ಯಾಯಾಲಯವು, ‘ವಾಣಿಜ್ಯ ಉದ್ದೇಶ’ ಕುರಿತು NCDRC ಯ ತರ್ಕದಲ್ಲಿ ದೋಷವಿದ್ದರೂ, ಪ್ರಕರಣದ ಸ್ವಭಾವದ ಹಿನ್ನೆಲೆಯಲ್ಲಿ ದೂರು ತಿರಸ್ಕರಿಸಿರುವುದು ಸರಿಯಾಗಿದೆ ಎಂದು ತೀರ್ಮಾನಿಸಿದೆ.


ಪ್ರಕರಣ ಶೀರ್ಷಿಕೆ: ಸಂತ ರೋಹಿದಾಸ ಚರ್ಮ ಉದ್ಯಮ ಹಾಗೂ ಚರ್ಮಕಾರ ಅಭಿವೃದ್ಧಿ ನಿಗಮ ನಿಯಮಿತ ವಿರುದ್ಧ ವಿಜಯಾ ಬ್ಯಾಂಕ್

ಸುಪ್ರೀಂ ಕೋರ್ಟ್‌, ಸಿವಿಲ್ ಅಪೀಲು 4841/2023 Dated 19-03-2026

Ads on article

Advertise in articles 1

advertising articles 2

Advertise under the article