-->
ಸ್ಥಿರಾಸ್ತಿ ರೇಟ್ ಪರಿಷ್ಕರಣೆ: ಮೂರು ವರ್ಷದ ಬಳಿಕ ಮತ್ತೆ ಮಾರ್ಗಸೂಚಿ ದರ ಹೆಚ್ಚಳ ಸಾಧ್ಯತೆ

ಸ್ಥಿರಾಸ್ತಿ ರೇಟ್ ಪರಿಷ್ಕರಣೆ: ಮೂರು ವರ್ಷದ ಬಳಿಕ ಮತ್ತೆ ಮಾರ್ಗಸೂಚಿ ದರ ಹೆಚ್ಚಳ ಸಾಧ್ಯತೆ

ಸ್ಥಿರಾಸ್ತಿ ರೇಟ್ ಪರಿಷ್ಕರಣೆ: ಮೂರು ವರ್ಷದ ಬಳಿಕ ಮತ್ತೆ ಮಾರ್ಗಸೂಚಿ ದರ ಹೆಚ್ಚಳ ಸಾಧ್ಯತೆ




ರಾಜ್ಯದಲ್ಲಿ ಸ್ಥಿರಾಸ್ತಿ ರೇಟ್ ಪರಿಷ್ಕರಣೆ ಮಾಡುವ ಸಿದ್ಧತೆ ನಡೆದಿದ್ದು, ಮೂರು ವರ್ಷದ ಬಳಿಕ ಮತ್ತೆ ಮಾರ್ಗಸೂಚಿ ದರ ಹೆಚ್ಚಳ ಸಾಧ್ಯತೆ ಇದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಶೇ.15ರಿಂದ ಶೇ.20ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.


2023ರ ಅಕ್ಟೋಬರ್‌ನಲ್ಲಿ ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಶೇ. 30ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗ ಎರಡೂವರೆ ವರ್ಷಗಳ ಬಳಿಕ ಮತ್ತೆ ಮಾರ್ಗಸೂಚಿ ದರ ಪರಿಷ್ಕರಣೆಗೆ ಚಿಂತನೆ ನಡೆದಿದೆ.


ಈಚೆಗೆ ನಿವೇಶನ, ಜಮೀನು ಮಾರುಕಟ್ಟೆ ಮೌಲ್ಯವು ಏರುಮುಖವಾಗಿದ್ದು, ಮಾರ್ಗಸೂಚಿ ದರಕ್ಕೆ ಪೂರಕವಾಗಿ ಮಾರುಕಟ್ಟೆ ದರ ನಿರ್ಧಾರವಾಗುತ್ತದೆ. ಈ ಪರಿಷ್ಕರಣೆಯಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 2,500 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹ ನಿರೀಕ್ಷೆ ಇದೆ.


ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರ್ಕಾರಕ್ಕೂ ಸವಾಲಾಗಿದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಸರ್ಕಾರ ವಿಶೇಷ ಒತ್ತು ನೀಡಿದ್ದು, ಪರಿಷ್ಕರಣೆ ಏಪ್ರಿಲ್‌ನಿಂದ ಅನ್ವಯವಾಗುವಂತೆ ನೂತನ ಮಾರ್ಗಸೂಚಿ ದರ ಜಾರಿಗೆ ಬರಲಿದೆ ಎನ್ನಲಾಗಿದೆ.


ಪ್ರಸಕ್ತ 2025-26 ಆರ್ಥಿಕ ವರ್ಷದಲ್ಲಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮೂಲದಿಂದ ಸರಕಾರ 28,000 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, 25,000 ಕೋಟಿ ರೂ. ಮಾತ್ರ ಸಂಗ್ರಹವಾಗುವ ನಿರೀಕ್ಷೆ ಇದೆ. ಅಂದರೆ ವಾರ್ಷಿಕ ಗುರಿಯಲ್ಲಿ 3000 ಕೋಟಿ ರೂ. ಖೋತಾ ಆಗುವ ಸಾಧ್ಯತೆ ದಟ್ಟವಾಗಿದೆ.


ರಾಜ್ಯಾದ್ಯಂತ 259 ಉಪ ನೋಂದಣಿ ಕಚೇರಿಗಳಿದ್ದು, ಅದರಲ್ಲಿ 43 ಕಚೇರಿಗಳು ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿವೆ. ರಾಜ್ಯದಲ್ಲಿ ವಾರ್ಷಿಕವಾಗಿ 22ರಿಂದ 24 ಲಕ್ಷ ಸ್ಥಿರಾಸ್ತಿ ನೋಂದಣಿ, ಇತರೆ ದಸ್ತಾವೇಜು ಪ್ರಕ್ರಿಯೆಗಳಾಗುತ್ತಿದ್ದು, ಅದರಲ್ಲಿ ಶೇ.60ರಷ್ಟು ನೋಂದಣಿ, ದಸ್ತಾವೇಜುಗಳು ಬೆಂಗಳೂರಿನ ಕಚೇರಿ ಗಳಲ್ಲಿ ನಡೆಯುತ್ತಿವೆ. ಮಾರ್ಗಸೂಚಿ ದರ ಪರಿಷ್ಕರಣೆಯಿಂದ ಸ್ಥಿರಾಸ್ತಿಗಳ ಮೌಲ್ಯವೂ ಪರಿಷ್ಕರಣೆಯಾಗಲಿದೆ ಎಂದು ಹೇಳಿವೆ.


Ads on article

Advertise in articles 1

advertising articles 2

Advertise under the article