'ಇ-ಸ್ವತ್ತು 2.0' ತಾಂತ್ರಿಕ ತೊಡಕು ನಿವಾರಣೆ: ಆಸ್ತಿ ಸಂಬಂಧಿತ ಸಮಸ್ಯೆ ನಿವಾರಿಸಲು ನಾಗರಿಕ ಸ್ನೇಹಿ ತಿದ್ದುಪಡಿ
'ಇ-ಸ್ವತ್ತು 2.0' ತಾಂತ್ರಿಕ ತೊಡಕು ನಿವಾರಣೆ: ಆಸ್ತಿ ಸಂಬಂಧಿತ ಸಮಸ್ಯೆ ನಿವಾರಿಸಲು ನಾಗರಿಕ ಸ್ನೇಹಿ ತಿದ್ದುಪಡಿ
'ಇ-ಸ್ವತ್ತು 2.0' ತಂತ್ರಾಂಶದಲ್ಲಿ ಇದ್ದ ತಾಂತ್ರಿಕ ತೊಡಕನ್ನು ನಿವಾರಣೆ ಮಾಡಲಾಗಿದ್ದು, ಆಸ್ತಿ ಸಂಬಂಧಿತ ಸಮಸ್ಯೆ ನಿವಾರಿಸಲು ನಾಗರಿಕ ಸ್ನೇಹಿ ತಿದ್ದುಪಡಿ ಮಾಡಲಾಗಿದೆ
ಈ ಬಗ್ಗೆ 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ನಿಯಮಗಳು 2025' ಕುರಿತಂತೆ ಅಧಿಸೂಚನೆ ಹೊರಡಿಸಲಾಗಿದೆ.
'ಇ-ಸ್ವತ್ತು' ತಂತ್ರಾಂಶವನ್ನು ನಾಗರಿಕ ಸ್ನೇಹಿಯಾಗಿ ಪರಿವರ್ತಿಸಿರುವುದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಮನವಿ ಮಾಡಿದೆ.
'ಇ-ಸ್ವತ್ತು' ತಂತ್ರಾಂಶದ ಮೂಲಕ ಆಸ್ತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸಲು ಹಾಗೂ ನಿಯಮಗಳಲ್ಲಿ ಸೂಕ್ತ ವರ್ಗೀಕರಣ, ಪರಿಷ್ಕರಣೆ ಸಂಬಂಧ ಬೇಡಿಕೆಗಳನ್ನು ಆಧರಿಸಿ ಕೆಲ ಮಾರ್ಪಾಡು ಮಾಡಲಾಗಿದೆ ಎಂದು ಹೇಳಿದ್ದಾರೆ.
ಎಪ್ರಿಲ್‌ಗೂ ಮುನ್ನ ನೋಂದಣಿ ಆಗಿರುವ, ಸೃಜನೆಯಾಗಿರುವ ಕಟ್ಟಡಗಳು ಮತ್ತು ನಿವೇಶನಗಳು ಪಂಚತಂತ್ರ ತಂತ್ರಾಂಶದಲ್ಲಿ ನಮೂದು ಆಗದಿದ್ದರೆ ಸಿಟಿಜನ್ ಇಂಟರ್ ಫೇಸ್ ಮೂಲಕ ಹೊಸ 11ಬಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಇದುವರೆಗೆ 27 ಸಾವಿರ ಅರ್ಜಿಗಳು ಸೃಜಿಸಲಾಗಿದೆ. ಈ ಪೈಕಿ 26 ಸಾವಿರ ಅರ್ಜಿಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಿಂದಲೇ ಸಲ್ಲಿಕೆಯಾಗಿದೆ.