-->
ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚಿದ ಬಲ: ನ್ಯಾಯಮೂರ್ತಿಗಳ ಸಂಖ್ಯೆ 38ಕ್ಕೇರಿಕೆ

ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚಿದ ಬಲ: ನ್ಯಾಯಮೂರ್ತಿಗಳ ಸಂಖ್ಯೆ 38ಕ್ಕೇರಿಕೆ

ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚಿದ ಬಲ: ನ್ಯಾಯಮೂರ್ತಿಗಳ ಸಂಖ್ಯೆ 38ಕ್ಕೇರಿಕೆ





ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 33ರಿಂದ 38ಕ್ಕೆ (ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಸೇರಿ) ಹೆಚ್ಚಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.


ಈ ಕುರಿತು ಸಂಸತ್ತಿನಲ್ಲಿ ಮಸೂದೆ ಮಂಡಿಸಲು ಕೇಂದ್ರ ಸಚಿವ ಸಂಪುಟ ಮೇ 5ರಂದು ನಿರ್ಧಾರ ತೆಗೆದುಕೊಂಡಿತ್ತು. ಅದರ ಬೆನ್ನಲ್ಲೇ ಸುಗ್ರೀವಾಜ್ಞೆ ಹೊರಡಿಸಲಾಗಿದೆ.


'ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಸುಗ್ರೀವಾಜ್ಞೆ-2026'ಕ್ಕೆ ರಾಷ್ಟ್ರಪತಿ ದೌಪದಿ ಮುರ್ಮುಅವರು ಶನಿವಾರ ಸಹಿ ಮಾಡಿದ್ದಾರೆ.


ಆದಾಗ್ಯೂ, ಆರು ತಿಂಗಳೊಳಗೆ ಈ ಸುಗ್ರೀವಾಜ್ಞೆ ಸಂಸತ್ತಿನಲ್ಲಿ ಅಂಗೀಕಾರ ಪಡೆಯಬೇಕು. ಇಲ್ಲದಿದ್ದರೆ ಅದು ರದ್ದಾಗುತ್ತದೆ. ಜುಲೈನಲ್ಲಿ ಮಳೆಗಾಲದ ಅಧಿವೇಶನ ನಡೆಯುವ ಸಾಧ್ಯತೆಯಿದೆ.


ಆದರೆ, ಈ ಸುಗ್ರೀವಾಜ್ಞೆಯನ್ನು ತುರ್ತಾಗಿ ತರುವ ಅಗತ್ಯವೇನಿತ್ತು ಎಂಬುದು ಸ್ಪಷ್ಟವಾಗಿಲ್ಲ. ನ್ಯಾಯಮೂರ್ತಿಗಳ ಸಂಖ್ಯೆಯ ಹೆಚ್ಚಳವು ತ್ವರಿತ ಮತ್ತು ಪರಿಣಾಮಕಾರಿ ನ್ಯಾಯವನ್ನು ಖಾತರಿ ಪಡಿಸುತ್ತದೆ ಎಂದು ಸರ್ಕಾರ ಈ ಹಿಂದೆ ಹೇಳಿತ್ತು.


ಸಂವಿಧಾನವು ಒಬ್ಬ ಮುಖ್ಯನ್ಯಾಯಮೂರ್ತಿ ಮತ್ತು ಇತರ ಏಳು ನ್ಯಾಯಮೂರ್ತಿಗಳಿಗೆ ಅವಕಾಶ ನೀಡಿದ್ದರೂ, 'ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ಕಾಯ್ದೆ-1956' ನ್ಯಾಯ ಮೂರ್ತಿಗಳ ಸಂಖ್ಯೆಯನ್ನು 10ಕ್ಕೇರಿಸಲು ಅವಕಾಶ ಮಾಡಿಕೊಟ್ಟಿತು.


ಈ ಕಾಯ್ದೆಗೆ ಹಲವು ಬಾರಿ ತಿದ್ದುಪಡಿಗಳಾಗಿದ್ದು, 1960ರಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 13ಕ್ಕೆ, 1977ರಲ್ಲಿ 17ಕ್ಕೆ, 198600 25, 200802 30 ಹಾಗೂ 2019ರಲ್ಲಿ ತಿದ್ದುಪಡಿ ಮೂಲಕ ನ್ಯಾಯಮೂರ್ತಿಗಳ ಸಂಖ್ಯೆಯನ್ನು 33ಕ್ಕೆ ಹೆಚ್ಚಿಸಲಾಯಿತು.


ಇದೀಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 33ರಿಂದ 38ಕ್ಕೆ ಏರಿಕೆಯಾಗಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu