ಕೆಎಸ್‌ಆರ್‌ಟಿಸಿ ಸಹಿತ ಸಾರಿಗೆ ನಿಗಮಗಳ ನೌಕರರ ವೇತನ ಶೇ 12.5ರಷ್ಟು ಏರಿಕೆ
ಕೆಎಸ್‌ಆರ್‌ಟಿಸಿ ಸಹಿತ ಸಾರಿಗೆ ನಿಗಮಗಳ ನೌಕರರ ವೇತನ ಶೇ 12.5ರಷ್ಟು ಏರಿಕೆ
ಕರ್ನಾಟಕ ರಾಜ್ಯ ಸರ್ಕಾರವು ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರು ಮತ್ತು ಅಧಿಕಾರಿಗಳ ವೇತನ ಪರಿಷ್ಕರಣೆ ಮಾಡಿದೆ. 2025ರ ಏಪ್ರಿಲ್ 1ರಿಂದ ಪೂರ್ವಾನ್ವಯ ಆಗುವಂತೆ ಮೂಲ ವೇತನದಲ್ಲಿ ಶೇ 12.5ರಷ್ಟು ಏರಿಕೆ ಮಾಡಲಾಗಿದೆ.
2026ರ ಜುಲೈನಿಂದ ಪರಿಷ್ಕೃತ ವೇತನವನ್ನು ನೀಡಲಾಗುತ್ತದೆ. ಹಿಂಬಾಕಿಯನ್ನು ಹಂತ-ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.
ನಾಲ್ಕು ನಿಗಮಗಳ 1.05 ಲಕ್ಷ ಸಿಬ್ಬಂದಿಗೆ ಈ ವೇತನ ಪರಿಷ್ಕರಣೆ ಅನ್ವಯವಾಗಲಿದೆ. ಪರಿಷ್ಕರಣೆಯಿಂದ ನಾಲ್ಕೂ ನಿಗಮಗಳಿಗೆ ಪ್ರತಿ ತಿಂಗಳು ₹72.80 ಕೋಟಿಯಂತೆ ವಾರ್ಷಿಕವಾಗಿ ಒಟ್ಟು ₹873.64 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2023ರ ಮಾರ್ಚ್‌ನ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿಯ ಮೊತ್ತ ₹ 1,271.92 ಕೋಟಿಯಲ್ಲಿ, ಮೊದಲ ಕಂತಿನ ₹ 450 ಕೋಟಿಯನ್ನು ಈಗಾಗಲೇ ಬಿಡುಗಡೆ ಮಾಡಿ ನೌಕರರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.