-->
ಉತ್ತರಾಧಿಕಾರಿ ಹೆಸರಿಲ್ಲ ಎಂದ ಮಾತ್ರಕ್ಕೆ ವಿಲ್ ಅಮಾನ್ಯವಲ್ಲ: ಸುಪ್ರೀಂ ಕೋರ್ಟ್

ಉತ್ತರಾಧಿಕಾರಿ ಹೆಸರಿಲ್ಲ ಎಂದ ಮಾತ್ರಕ್ಕೆ ವಿಲ್ ಅಮಾನ್ಯವಲ್ಲ: ಸುಪ್ರೀಂ ಕೋರ್ಟ್

ಉತ್ತರಾಧಿಕಾರಿ ಹೆಸರಿಲ್ಲ ಎಂದ ಮಾತ್ರಕ್ಕೆ ವಿಲ್ ಅಮಾನ್ಯವಲ್ಲ: ಸುಪ್ರೀಂ ಕೋರ್ಟ್





'ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ಹೊರಗಿಟ್ಟ ಮಾತ್ರಕ್ಕೆ ವಿಲ್ ಅಮಾನ್ಯವಾಗುವುದಿಲ್ಲ' ಎಂದು ಸುಪ್ರೀಂ ಕೋರ್ಟ್ ಪ್ರಕರಣವೊಂದರ ವಿಚಾರಣೆ ವೇಳೆ ಸ್ಪಷ್ಟಪಡಿಸಿದೆ.


ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ವಿಜಯ್ ಬಿಷ್ಟೋಯ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.


ಕರ್ನಾಟಕದಲ್ಲಿರುವ ತನ್ನ ಆಸ್ತಿಯನ್ನು ದಿವಂಗತ ಬಿ. ಶೀನಾ ನಾಯರಿ ತಮ್ಮ ಸಹೋದರಿ ಲಕ್ಷ್ಮೀ ನಾಯರಿಗೆ ದಾನ ಮಾಡಿದ್ದ ವಿಲ್‌ನ ಸಿಂಧುತ್ವ ಪ್ರಶ್ನಿಸಿ ಶೀನಾ ನಾಯರಿ ಅವರ ಪತ್ನಿ ಮತ್ತು ಮಕ್ಕಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ವಜಾಗೊಳಿಸಿತು.


'ವಿಲ್ ಅಧಿಕೃತವಾದದ್ದು' ಎಂಬ ವಿಚಾರಣಾ ನ್ಯಾಯಾಲಯ, ಮೇಲ್ಮನವಿ ನ್ಯಾಯಾಲಯ ಮತ್ತು ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.


ವಿಲ್ ಬರೆದವರು ತಮ್ಮ ಹೆಂಡತಿ, ಮಕ್ಕಳು ಅಥವಾ ಇತರೆ ಸಂಬಂಧಿಕರಿಗೆ ಯಾವುದೇ ಅನ್ಯಾಯ ಮಾಡಿಲ್ಲ ಎನ್ನುವುದು ಸ್ಪಷ್ಟವಾಗಿದೆ.


ಜತೆಗೆ, ಅವರು ಮುಂಬೈನಲ್ಲಿ ವಾಸಿಸುತ್ತಿರುವ ತಮ್ಮ ಪತ್ನಿ ಮತ್ತು ಮಕ್ಕಳಿಗೆ ಸಾಕಷ್ಟು ಆಸ್ತಿಯನ್ನು ನೀಡಿದ್ದಾರೆ.


ಹೀಗಿರುವಾಗ ನೈಸರ್ಗಿಕ ಉತ್ತರಾಧಿಕಾರಿಗಳನ್ನು ಹೊರಗಿಟ್ಟಿರುವುದನ್ನು, ವಿಲ್ ಅಮಾನ್ಯಗೊಳಿಸಲು ಅನುಮಾನಾಸ್ಪದ ಸನ್ನಿವೇಶ ಎಂದು ಪರಿಗಣಿಸಲು ಆಗುವುದಿಲ್ಲ' ಎಂದು ನ್ಯಾಯಪೀಠ ಹೇಳಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu