-->
ದತ್ತು ಸ್ವೀಕರಿಸಿದ ಮಗು ಜೈವಿಕ ಮಗುವಿಗಿಂತ ಭಿನ್ನವಲ್ಲ: ಮಾತೃತ್ವ ರಜೆಗೆ ಮಹಿಳೆ ಅರ್ಹ- ಸುಪ್ರೀಂ ಕೋರ್ಟ್‌

ದತ್ತು ಸ್ವೀಕರಿಸಿದ ಮಗು ಜೈವಿಕ ಮಗುವಿಗಿಂತ ಭಿನ್ನವಲ್ಲ: ಮಾತೃತ್ವ ರಜೆಗೆ ಮಹಿಳೆ ಅರ್ಹ- ಸುಪ್ರೀಂ ಕೋರ್ಟ್‌

ದತ್ತು ಸ್ವೀಕರಿಸಿದ ಮಗು ಜೈವಿಕ ಮಗುವಿಗಿಂತ ಭಿನ್ನವಲ್ಲ: ಮಾತೃತ್ವ ರಜೆಗೆ ಮಹಿಳೆ ಅರ್ಹ- ಸುಪ್ರೀಂ ಕೋರ್ಟ್‌





ದತ್ತು ಸ್ವೀಕರಿಸಿದ ಮಗು ಜೈವಿಕ ಮಗುವಿಗಿಂತ ಭಿನ್ನವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ದತ್ತು ಸ್ವೀಕರಿಸಿದ ಮಹಿಳೆ ಮಾತೃತ್ವ ರಜೆಗೆ ಅರ್ಹರಾಗಿದ್ದಾರೆ ಎಂದು ಹೇಳಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲಾ ಮತ್ತು ಆ‌ರ್.ಮಹಾದೇವನ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.


'ಮಗುವನ್ನು ಕಾನೂನುಬದ್ದವಾಗಿ ದತ್ತು ಪಡೆದುಕೊಂಡ ಮಹಿಳೆಯು ಮಗುವಿನ ವಯಸ್ಸನ್ನು ಪರಿಗಣಿಸದೆ 12 ವಾರಗಳ ಮಾತೃತ್ವ ರಜೆಗೆ ಅರ್ಹರಾಗಿರುವರು' ಎಂದು ಹೇಳಿರುವ ನ್ಯಾಯಪೀಠ, ಮೂರು ತಿಂಗಳಿಗೂ ಕಡಿಮೆ ವಯಸ್ಸಿನ ಮಗುವನ್ನು ದತ್ತು ತೆಗೆದುಕೊಳ್ಳುವ ಮಹಿಳೆ ಮಾತ್ರ ತಾಯ್ತನ ರಜೆಗೆ ಅರ್ಹರಾಗುತ್ತಾರೆ ಎಂಬ ಕಾನೂನನ್ನು ರದ್ದುಗೊಳಿಸಿದೆ.


ಸಾಮಾಜಿಕ ಭದ್ರತೆ ಸಂಹಿತೆ-2020ರ ಸೆಕ್ಷನ್ 60 (4)ರ ಅಡಿಯಲ್ಲಿ ವಯಸ್ಸಿನ ಆಧಾರದ ವರ್ಗೀಕರಣವು ಸಂವಿಧಾನದ 14 ಮತ್ತು 21ನೇ ವಿಧಿಗಳ ಉಲ್ಲಂಘನೆ ಯಾಗಿದೆ ಎಂದು ನ್ಯಾಯಪೀಠ ಹೇಳಿದೆ.


'ಈಗ ಇರುವ ಕಾನೂನು ತಾರತಮ್ಯದಿಂದ ಕೂಡಿದೆ' 3 ತಿಂಗಳಿಗೂ ಕಡಿಮೆ ವಯೋಮಾನದ ಮಗುವನ್ನು ದತ್ತು ತೆಗೆದುಕೊಳ್ಳುವ ಮಹಿಳೆ ಮಾತ್ರ ತಾಯ್ತನದ ರಜೆ ತೆಗೆದು ಕೊಳ್ಳಲು ಅರ್ಹ ಎಂಬ ನಿಬಂಧನೆಯನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ.

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu