ವೈಯಕ್ತಿಕ, ಸೇವಾ ಸಂಬಂಧಿ ತೊಂದರೆ ಪರಿಗಣನೆ: ಉದ್ಯೋಗಿಗೆ ವರ್ಗಾವಣೆ ಆದೇಶದ ವಿರುದ್ಧ ಮನವಿ ಸಲ್ಲಿಸುವ ಹಕ್ಕಿದೆ- ಹೈಕೋರ್ಟ್
ವೈಯಕ್ತಿಕ, ಸೇವಾ ಸಂಬಂಧಿ ತೊಂದರೆ ಪರಿಗಣನೆ: ಉದ್ಯೋಗಿಗೆ ವರ್ಗಾವಣೆ ಆದೇಶದ ವಿರುದ್ಧ ಮನವಿ ಸಲ್ಲಿಸುವ ಹಕ್ಕಿದೆ- ಹೈಕೋರ್ಟ್
ಮಧ್ಯಪ್ರದೇಶ ಹೈಕೋರ್ಟ್, ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯನ್ನು ಅಧಿಕಾರಿಗಳು ಪರಿಗಣಿಸುವವರೆಗೆ ಅರಣ್ಯ ಇಲಾಖೆಯ ಒಬ್ಬ ಅಧಿಕಾರಿಗೆ ತನ್ನ ಪ್ರಸ್ತುತ ಕಾರ್ಯಸ್ಥಳದಲ್ಲೇ ಮುಂದುವರಿಯಲು ಅವಕಾಶ ನೀಡಿದೆ.
30 ದಿನಗಳೊಳಗೆ ಅರಣ್ಯ ಅಧಿಕಾರಿಯ ಮಾನವಿಯನ್ನು ಪರಿಗಣಿಸಲು ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ವರ್ಗಾವಣೆ ಕುರಿತ ಮನವಿ ನಿರ್ಧಾರವಾಗುವವರೆಗೆ ಪ್ರಸ್ತುತ ಹುದ್ದೆಯಲ್ಲೇ ಮುಂದುವರಿಯಲು ಅವಕಾಶ ನೀಡಿದೆ.
ಮಧ್ಯಪ್ರದೇಶ ಹೈಕೋರ್ಟ್, ದೇವಾಸ್ ಜಿಲ್ಲೆಯಿಂದ ಭೋಪಾಲ್‌ಗೆ ವರ್ಗಾವಣೆಗೊಂಡಿದ್ದ ಅರಣ್ಯ ಇಲಾಖೆಯ ಉದ್ಯೋಗಿಯೊಬ್ಬರಿಗೆ ಮಧ್ಯಂತರ ರಕ್ಷಣೆ ನೀಡಿದ್ದು, ವರ್ಗಾವಣೆ ಆದೇಶದ ವಿರುದ್ಧ ಉದ್ಯೋಗಿಗೆ ಪ್ರಾತಿನಿಧ್ಯ ಸಲ್ಲಿಸುವ ಹಾಗೂ ವೈಯಕ್ತಿಕ ಹಾಗೂ ಸೇವಾ ಸಂಬಂಧಿತ ತೊಂದರೆಗಳನ್ನು ಪರಿಗಣಿಸುವಂತೆ ಕೋರುವ ಹಕ್ಕು ಇದೆ ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲಾ ಅವರು ಈ ಆದೇಶವನ್ನು, ದೇವಾಸ್ ಜಿಲ್ಲೆಯ ಕನ್ನೋಡ್‌ನಿಂದ ಭೋಪಾಲ್‌ನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ವರ್ಗಾವಣೆಗೊಂಡಿದ್ದ ದಿನೇಶ್ ವಾಸ್ಕೆಲ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ಮಾಡುವ ಸಂದರ್ಭದಲ್ಲಿ ನೀಡಿದ್ದಾರೆ.
ನ್ಯಾಯಾಲಯವು, ಅರ್ಜಿದಾರರ ಪ್ರಾತಿನಿಧ್ಯವನ್ನು 30 ದಿನಗಳೊಳಗೆ ಪರಿಗಣಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿ, ಅದುವರೆಗೆ ಅವರನ್ನು ಅವರ ಪ್ರಸ್ತುತ ಕಾರ್ಯಸ್ಥಳದಲ್ಲೇ ಮುಂದುವರಿಸಲು ಆದೇಶಿಸಿದೆ.