ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ: 3395 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ: 3395 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಶಕದಿಂದ ಇದೇ ಮೊದಲ ಬಾರಿಗೆ ಭರ್ಜರಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 3395 ಹುದ್ದೆಗಳಿಗೆ ನೇಮಕಾತಿ ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-07-2026 ಆಗಿರುತ್ತದೆ. ಲಿಖಿತ ಪರೀಕ್ಷೆ ಆಗಸ್ಟ್ 02, 2026ರಂದು ನಡೆಯಲಿದೆ.
ಆಯ್ಕೆ ವಿಧಾನ ಲಿಖಿತ ಪರೀಕ್ಷೆ ಮತ್ತು ದೇಹದಾರ್ಢ್ಯ ಹಾಗೂ ಸಹಿಷ್ಣುತೆಯ ಪರೀಕ್ಷೆ ಮೂಲಕ ನಡೆಯಲಿದೆ.
ಕನಿಷ್ಟ ವಿದ್ಯಾರ್ಹತೆ ಪಿಯುಸಿ ಆಗಿರುತ್ತದೆ. ವಯೋಮಿತಿ ವಯಸ್ಸು 18ರಿಂದ 33 ವರ್ಷದ ಒಳಗಿನವರಾಗಿರಬೇಕು. ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಪುರುಷ ಅಭ್ಯರ್ಥಿಗಳಿಗೆ 2266 ಹುದ್ದೆಯನ್ನು ಮೀಸಲಿಡಲಾಗಿದೆ. 755 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗೆ ಮತ್ತು 257 ಹುದ್ದೆಗಳನ್ನು ಇನ್ ಸರ್ವಿಸ್ ವಿಭಾಗಕ್ಕೆ ಮೀಸಲಿಡಲಾಗಿದೆ. ವಿಶೇಷ ಸಾಮರ್ಥ್ಯದ ಅಭ್ಯರ್ಥಿಗಳಿಗೆ 82 ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ 35 ಹುದ್ದೆಗಳನ್ನು ಮೀಸಲಿಡಲಾಗಿದೆ.
ಹೆಚ್ಚಿನ ಮಾಹಿತಿಗೆ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಅಧಿಸೂಚನೆಯನ್ನು ನೋಡಬಹುದು.