-->
ಸರಕಾರಿ ನೌಕರರಿಗೆ ಸಿಹಿ ಸುದ್ದಿ! ನಗದು ರಹಿತ ಆರೋಗ್ಯ ತಪಾಸಣೆಗೆ ಸರ್ಕಾರದ ಆದೇಶ

ಸರಕಾರಿ ನೌಕರರಿಗೆ ಸಿಹಿ ಸುದ್ದಿ! ನಗದು ರಹಿತ ಆರೋಗ್ಯ ತಪಾಸಣೆಗೆ ಸರ್ಕಾರದ ಆದೇಶ

ಸರಕಾರಿ ನೌಕರರಿಗೆ ಸಿಹಿ ಸುದ್ದಿ! ನಗದು ರಹಿತ ಆರೋಗ್ಯ ತಪಾಸಣೆಗೆ ಸರ್ಕಾರದ ಆದೇಶ





ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಟ್ಟ, 40 ವರ್ಷ ವಯಸ್ಸು ದಾಟಿದ ಸರಕಾರಿ ನೌಕರರು ವಾರ್ಷಿಕ ವೈದ್ಯಕೀಯ ತಪಾಸಣೆ ಯೋಜನೆಯಡಿ ವರ್ಷದಲ್ಲಿ ಒಂದು ಬಾರಿ ನಗದು ರಹಿತ ವೈದ್ಯಕೀಯ ತಪಾಸಣೆ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.


ರಕ್ತದೊತ್ತಡ, ಮಧುಮೇಹ ಸೇರಿ ಸಾಮಾನ್ಯ ಪರೀಕ್ಷೆ, ನೇತ್ರ ತಪಾಸಣೆ, ಹೃದಯ, ಶ್ವಾಸಕೋಶ, ಕರುಳು, ಕಿಡ್ನಿ, ದಂತ ಸೇರಿ ಅಗತ್ಯ ಪರೀಕ್ಷೆಗಳು, ಇಎನ್‌ಟಿ, ಕ್ಯಾನ್ಸ‌ರ್ ಸೇರಿ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ.


ಸರಕಾರಿ ಆಸ್ಪತ್ರೆ (ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಸೇರಿದಂತೆ), ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ನೋಂದಣಿಯಾದ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ತಪಾಸಣೆ ಮಾಡಿಸಿಕೊಳ್ಳಬೇಕಿದ್ದು, ಒಂದೇ ಸಂಸ್ಥೆಯಲ್ಲಿ ಒಂದೇ ಕ್ಷೇಮ್‌ನಲ್ಲಿ ಪರೀಕ್ಷೆಗೆ ಒಳಪಡಬೇಕು.


ಇದಕ್ಕಾಗಿ ಸರಕಾರ ನಿಗದಿಪಡಿಸಿರುವ ವಾರ್ಷಿಕ ವೈದ್ಯಕೀಯ ದರ (ಪುರುಷರಿಗೆ 2 ಸಾವಿರ/ಮಹಿಳೆಯರಿಗೆ 2,200) ಮಿತಿಗೊಳಪಟ್ಟು ಮಂಜೂರಾತಿ ನೀಡುವಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಸೂಚಿಸಲಾಗಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu