-->
ವಕೀಲರ ಪರಿಷತ್ತು ಚುನಾವಣೆ: ಫಲಿತಾಂಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

ವಕೀಲರ ಪರಿಷತ್ತು ಚುನಾವಣೆ: ಫಲಿತಾಂಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

ವಕೀಲರ ಪರಿಷತ್ತು ಚುನಾವಣೆ: ಫಲಿತಾಂಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ





ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಚುನಾವಣೆ 2026ರ ಫಲಿತಾಂಶ ಘೋಷಣೆಗೆ ತಡೆ ನೀಡಲು ಕರ್ನಾಟಕ ಉಚ್ಚ ನ್ಯಾಯಾಲಯವು ಈ ದಿನ ನಿರಾಕರಿಸಿದೆ.


ನಗದು ಲಂಚ, ಮೊದಲೇ ಗುರುತು ಹಾಕಿದ ಮತಪತ್ರಗಳು ಮತ್ತು ನಕಲಿ ಮತದಾನ ಸೇರಿದಂತೆ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಸ್ಪರ್ಧಿಗಳಾದ ಸಂಧ್ಯಾ ಯು ಪ್ರಭು ಹಾಗೂ‌ ಹೇಮಾ ಕರಿಯಪ್ಪ ಗೌಡ ರವರುಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.


ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ರವರಿದ್ದ ಏಕಸದಸ್ಯ ಪೀಠವು, ಆರಂಭದಲ್ಲಿ ಚುನಾವಣಾ ನ್ಯಾಯಮಂಡಳಿಗಳನ್ನು ಸಂಪರ್ಕಿಸುವ ಸ್ವಾತಂತ್ರ್ಯವನ್ನು ಕಲ್ಪಿಸಿ ಎರಡೂ ಅರ್ಜಿಗಳನ್ನು ವಜಾಗೊಳಿಸಲು ಉದ್ದೇಶಿಸಿತ್ತು. ಆದರೆ ನಂತರ, ಜೂನ್ 10 ರಂದು ಅರ್ಜಿದಾರರ ವಾದವನ್ನು ಮತ್ತಷ್ಟು ಆಲಿಸಲು ಸಮ್ಮತಿಸಿ, ಪ್ರಕರಣವನ್ನು ಮುಂದೂಡಿತು.


ಪ್ರಸ್ತುತ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯವು ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

​ನ್ಯಾಯಾಲಯವು ಮೌಖಿಕವಾಗಿ, "ಒಮ್ಮೆ ಮತ ಎಣಿಕೆ ನಡೆಯುತ್ತಿರುವಾಗ ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡ ನಂತರವೇ ಈ ವಿಷಯವನ್ನು ಪರಿಗಣಿಸಬಹುದು. ಅನ್ಯಾಯವಾಗಿದೆ ಎಂದು ಭಾವಿಸುವ ಅರ್ಜಿದಾರರು, ಸೂಕ್ತ ವೇದಿಕೆಯ ಮುಂದೆ ಚುನಾವಣೆಯನ್ನು ಪ್ರಶ್ನಿಸಿ ಕಾನೂನು ಹೋರಾಟ ಮುಂದುವರಿಸಬಹುದು" ಎಂದು ತಿಳಿಸಿದೆ.


ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಕೀಲೆ ಸಂಧ್ಯಾ ಯು ಪ್ರಭು ಅವರು ಖುದ್ದು ಹಾಜರಾಗಿ, ಚುನಾವಣೆಯಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದ (BCI) ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ದೂರಿದರು. ಅಲ್ಲದೆ, ಎಲ್ಲಾ ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಮತಪತ್ರಗಳ ಸಾಫ್ಟ್ ಕಾಪಿಗಳನ್ನು ಒದಗಿಸುವಂತೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯಕ್ಕೆ ಕೋರಿದರು. ರಾಜ್ಯಾದ್ಯಂತ 149 ಅಭ್ಯರ್ಥಿಗಳಲ್ಲಿ 23 ಸದಸ್ಯರನ್ನು ಆಯ್ಕೆ ಮಾಡಲು ಮಾರ್ಚ್ 11, 2026 ರಂದು ನಡೆದ ಚುನಾವಣೆಯಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದ (BCI) ನೀತಿ ಸಂಹಿತೆಯ ಗಂಭೀರ ಉಲ್ಲಂಘನೆ ನಡೆದಿದೆ ಎಂದು ಅವರು ಆರೋಪಿಸಿದರು.


ಅದೇ ರೀತಿ, ಮತ್ತೊಬ್ಬ ಅಭ್ಯರ್ಥಿ ಹೇಮಾ ಕರಿಯಪ್ಪ ಗೌಡ, ಮತದಾರರನ್ನು ಪ್ರಭಾವಿಸಲು ಹಲವಾರು ಅಭ್ಯರ್ಥಿಗಳು ನಗದು ಲಂಚ, ಉಡುಗೊರೆಗಳನ್ನು ವಿತರಿಸಿದ್ದಾರೆ ಮತ್ತು ಅನಧಿಕೃತ ಪಾರ್ಟಿಗಳನ್ನು ಆಯೋಜಿಸಿದ್ದಾರೆ ಎಂದು ಆರೋಪಿಸಿದರು. ಮತಗಟ್ಟೆಗಳಲ್ಲಿಯೇ ಹಣ ವಿತರಿಸಲಾಯಿತು ಎಂದು ಅವರು ಪ್ರತಿಪಾದಿಸಿದರು.


ತಾನು ಹೈ-ಪವರ್ಡ್ ಎಲೆಕ್ಷನ್ ಕಮಿಟಿಯ (HPEC) ಮುಂದೆ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಫಲಿತಾಂಶ ಘೋಷಣೆಗೆ ತಡೆ ನೀಡಬೇಕೆಂದು ಅವರು ಮಧ್ಯಂತರ ಪ್ರಾರ್ಥನೆಯನ್ನು ಸಲ್ಲಿಸಿದರು.


ಚುನಾವಣೆಯಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದ (BCI) ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ದೂರಿದರು. ಅಲ್ಲದೆ, ಎಲ್ಲಾ ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಮತಪತ್ರಗಳ ಸಾಫ್ಟ್ ಕಾಪಿಗಳನ್ನು ಒದಗಿಸುವಂತೆ ನ್ಯಾಯಾಲಯಕ್ಕೆ ಕೋರಿದರು.


ಪ್ರತಿವಾದಿ ಪಕ್ಷಗಾರರುಳಾದ ರಾಜ್ಯ ಬಾರ್ ಕೌನ್ಸಿಲ್, ಚುನಾವಣಾಧಿಕಾರಿ ಮತ್ತು ಹೈ-ಪವರ್ಡ್ ಎಲೆಕ್ಷನ್ ಕಮಿಟಿಯ ಪ್ರತಿನಿಧಿಗಳ ವಾದವನ್ನು ಆಲಿಸಿದ ಪೀಠವು, ತಕ್ಷಣಕ್ಕೆ ಫಲಿತಾಂಶ ಘೋಷಣೆಗೆ ತಡೆ ನೀಡಲಿಲ್ಲ. ಆದಾಗ್ಯೂ, ಪುರಾವೆಗಳನ್ನು ರಕ್ಷಿಸುವ ದೃಷ್ಟಿಯಿಂದ, ಎಲ್ಲಾ ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಇಂದಿನಿಂದ ನಾಲ್ಕು ತಿಂಗಳವರೆಗೆ ಸುರಕ್ಷಿತವಾಗಿ ಸಂರಕ್ಷಿಸಿಡಬೇಕು ಎಂದು ಪ್ರತಿವಾದಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.


​ಈ ಹಿಂದೆ ಮೇ 18, 2026 ರಂದು ರಚಿಸಲಾದ ವಿಶೇಷ ಚುನಾವಣಾ ನ್ಯಾಯಮಂಡಳಿಗಳ (ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಗುಪ್ತಾ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ) ಉಲ್ಲೇಖವನ್ನು ಪೀಠವು ಗಮನಿಸಿತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ನಿಗದಿಪಡಿಸಿ ವಿಚಾರಣೆಯನ್ನು ಮುಂದೂಡಿತು.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu