-->
ಮೊಬೈಲ್ ಆಪ್ ಮೂಲಕ ಬಯೋಮೆಟ್ರಿಕ್: ಕೋರ್ಟ್‌ನಲ್ಲಿ ಜಿಯೋ ಫೆನ್ಸಿಂಗ್ ಹಾಜರಾತಿ ಜಾರಿ

ಮೊಬೈಲ್ ಆಪ್ ಮೂಲಕ ಬಯೋಮೆಟ್ರಿಕ್: ಕೋರ್ಟ್‌ನಲ್ಲಿ ಜಿಯೋ ಫೆನ್ಸಿಂಗ್ ಹಾಜರಾತಿ ಜಾರಿ

ಮೊಬೈಲ್ ಆಪ್ ಮೂಲಕ ಬಯೋಮೆಟ್ರಿಕ್: ಕೋರ್ಟ್‌ನಲ್ಲಿ ಜಿಯೋ ಫೆನ್ಸಿಂಗ್ ಹಾಜರಾತಿ ಜಾರಿ





ನ್ಯಾಯಾಲಯಗಳಲ್ಲಿ 'ಕರ್ತವ್ಯ (KAAMS)' ಮೊಬೈಲ್ ಆಪ್ ಮೂಲಕ ಬಯೋಮೆಟ್ರಿಕ್ ಹಾಜರಾತಿ: ಹಂತ ಹಂತವಾಗಿ ಜಾರಿ


ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಂಗ ಘಟಕದ ಎಲ್ಲಾ ನ್ಯಾಯಾಲಯಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಹಾಜರಾತಿಯನ್ನು ಹೆಚ್ಚು ಪಾರದರ್ಶಕ ಹಾಗೂ ತಾಂತ್ರಿಕವಾಗಿ ಸಮರ್ಥವಾಗಿ ನಿರ್ವಹಿಸುವ ಉದ್ದೇಶದಿಂದ 'ಕರ್ತವ್ಯ (Kartavya)' ಮೊಬೈಲ್ ಅಪ್ಲಿಕೇಶನ್ ಮೂಲಕ ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (KAAMS) ಅನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ.


ಈ ಕುರಿತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ, ಮಂಗಳೂರು ಅವರು 04.07.2026ರಂದು ಸುತ್ತೋಲೆ ಹೊರಡಿಸಿದ್ದು, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ.


ಈ ಹೊಸ ವ್ಯವಸ್ಥೆಯಡಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ತಮ್ಮ ಮೊಬೈಲ್‌ನಲ್ಲಿ Kartavya (KAAMS) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ KGID ಸಂಖ್ಯೆಯ ಮೂಲಕ ನೋಂದಣಿ ಪೂರ್ಣಗೊಳಿಸಬೇಕು. ಬಳಿಕ ಮುಖದ (Face Authentication) ದೃಢೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತಮ್ಮ ನೌಕರರ ಪ್ರೊಫೈಲ್‌ಗೆ ಜೋಡಿಸಬೇಕು.


ದೈನಂದಿನ ಹಾಜರಾತಿಗಾಗಿ ಬೆಳಿಗ್ಗೆ "CHECK-IN" ಹಾಗೂ ಸಂಜೆ "CHECK-OUT" ಆಯ್ಕೆಯನ್ನು ಬಳಸಬೇಕು. ಹಾಜರಾತಿ ದಾಖಲಿಸುವ ವೇಳೆ ನೇರ ಮುಖದ ದೃಢೀಕರಣ (Live Face Authentication) ಕಡ್ಡಾಯವಾಗಿದ್ದು, ನ್ಯಾಯಾಲಯದ ಜಿಯೋಫೆನ್ಸಿಂಗ್ (Geofencing) ವ್ಯಾಪ್ತಿಯೊಳಗೆ ಇದ್ದಾಗ ಮಾತ್ರ ಹಾಜರಾತಿ ದಾಖಲಾಗುತ್ತದೆ.


ಆದಾಗ್ಯೂ, ಮುಂದಿನ ಆದೇಶದವರೆಗೆ ಈಗಾಗಲೇ ಜಾರಿಯಲ್ಲಿರುವ ಮುಖ ಅಥವಾ ಬೆರಳಚ್ಚು ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನೂ ಸಿಬ್ಬಂದಿಯವರು ಮುಂದುವರಿಸಬೇಕಾಗಿದೆ.


ಇದಲ್ಲದೆ, ಮುಖದ ದೃಢೀಕರಣದಲ್ಲಿ ಯಾವುದೇ ತಾಂತ್ರಿಕ ತೊಂದರೆ ಉಂಟಾಗದಂತೆ ಎಲ್ಲಾ ಸಿಬ್ಬಂದಿಯವರು ತಮ್ಮ ಆಧಾರ್ ಕಾರ್ಡ್‌ನಲ್ಲಿ ಇತ್ತೀಚಿನ ಭಾವಚಿತ್ರವನ್ನು ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ಅಪ್‌ಡೇಟ್ ಕೇಂದ್ರದಲ್ಲಿ ನವೀಕರಿಸಿಕೊಳ್ಳುವಂತೆ ಸೂಚಿಸಲಾಗಿದೆ.


ಪ್ರತಿ ನ್ಯಾಯಾಲಯದ ಮುಖ್ಯ ಲಿಪಿಕ ಅಧಿಕಾರಿಗಳು ತಮ್ಮ ನ್ಯಾಯಾಲಯದ ಸಿಬ್ಬಂದಿಯವರು Kartavya (KAAMS) ಆ್ಯಪ್ ಅನ್ನು ಸ್ಥಾಪಿಸಿ ನೋಂದಣಿ ಪೂರ್ಣಗೊಳಿಸಿರುವ ಕುರಿತು ಪಾಲನಾ ವರದಿಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕಾಗಿದೆ.


ನ್ಯಾಯಾಂಗ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸುವ ಹಾಗೂ ಸಿಬ್ಬಂದಿಯ ಹಾಜರಾತಿ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ 'ಕರ್ತವ್ಯ (KAAMS)' ಮೊಬೈಲ್ ಅಪ್ಲಿಕೇಶನ್ ಮಹತ್ವದ ಹೆಜ್ಜೆಯಾಗಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu