-->
ಎರಡು ದಿನಗಳ ಸರ್ವರ್ ಬ್ರೇಕ್ ಡೌನ್‌ ಎಫೆಕ್ಟ್‌: ಭಾನುವಾರವೂ ನಡೆಯಲಿದೆ ಆಸ್ತಿ ನೋಂದಣಿ ಕಾರ್ಯ

ಎರಡು ದಿನಗಳ ಸರ್ವರ್ ಬ್ರೇಕ್ ಡೌನ್‌ ಎಫೆಕ್ಟ್‌: ಭಾನುವಾರವೂ ನಡೆಯಲಿದೆ ಆಸ್ತಿ ನೋಂದಣಿ ಕಾರ್ಯ

ಎರಡು ದಿನಗಳ ಸರ್ವರ್ ಬ್ರೇಕ್ ಡೌನ್‌ ಎಫೆಕ್ಟ್‌: ಭಾನುವಾರವೂ ನಡೆಯಲಿದೆ ಆಸ್ತಿ ನೋಂದಣಿ ಕಾರ್ಯ





ಕಳೆದ ಎರಡು ದಿನಗಳ ಕಾಲ ರಾಜ್ಯದ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಕಾವೇರಿ ಪೋರ್ಟಲ್‌ನ ಸರ್ವರ್ ಬ್ರೇಕ್ ಡೌನ್‌ ಆಗಿದ್ದು, ಇದರ ಎಫೆಕ್ಟ್‌ ಇಲಾಖೆಗೆ ತಟ್ಟಿದೆ. ಈ ಕಾರಣಕ್ಕೆ ಭಾನುವಾರವೂ ಆಸ್ತಿ ನೋಂದಣಿ ಕಾರ್ಯ ನಡೆಯಲಿದೆ


ಜುಲೈ 12ರ ಭಾನುವಾರ ರಾಜ್ಯದ ಎಲ್ಲಾ ಉಪ ನೋಂದಣಿ ಕಚೇರಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸಲಿವೆ ಎಂದು ರಾಜ್ಯದ ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ಪ್ರಕಟಣೆ ತಿಳಿಸಿದೆ.

ರಾಜ್ಯದಾದ್ಯಂತ ಇರುವ ಎಲ್ಲಾ ಉಪ ನೋಂದಣಿ ಕಚೇರಿಗಳು (Sub-Registrar Offices) 2026 ನೇ ಜುಲೈ 12 ರ ಭಾನುವಾರದಂದು ಸಾರ್ವಜನಿಕ ರಜಾ ದಿನವಾಗಿದ್ದರೂ ಸಹ, ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಇಲಾಖೆಯ ಕಾರ್ಯದೊತ್ತಡ ನಿವಾರಣೆಗಾಗಿ ಎಂದಿನಂತೆ ತೆರೆದಿದ್ದು, ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ.


​ಈ ದಿನದಂದು ಸಾರ್ವಜನಿಕರು ಎಂದಿನಂತೆ ಆಸ್ತಿ ನೋಂದಣಿ, ಮುದ್ರಾಂಕ ಖರೀದಿ ಹಾಗೂ ಇಲಾಖೆಗೆ ಸಂಬಂಧಿಸಿದ ಇತರ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ವಿಶೇಷ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಯು ​ಪ್ರಕಟಣೆಯಲ್ಲಿ ತಿಳಿಸಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu