-->
ಜಸ್ಟಿಸ್ ವರ್ಮಾ ನಿವಾಸದಲ್ಲಿ ನಗದು ಪತ್ತೆ ಪ್ರಕರಣ: ಎಫ್‌ಐಆರ್, ತನಿಖೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಜಸ್ಟಿಸ್ ವರ್ಮಾ ನಿವಾಸದಲ್ಲಿ ನಗದು ಪತ್ತೆ ಪ್ರಕರಣ: ಎಫ್‌ಐಆರ್, ತನಿಖೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಜಸ್ಟಿಸ್ ವರ್ಮಾ ನಿವಾಸದಲ್ಲಿ ನಗದು ಪತ್ತೆ ಪ್ರಕರಣ: ಎಫ್‌ಐಆರ್, ತನಿಖೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ





ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಪತ್ತೆಯಾದ ಎನ್ನಲಾದ ಅಪಾರ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ಹಾಗೂ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.


ಅಲಹಾಬಾದ್ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಬೆಂಕಿ ಅವಘಡದ ಬಳಿಕ ಅಪಾರ ಪ್ರಮಾಣದ ನಗದು ಪತ್ತೆಯಾದ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ FIR ದಾಖಲಿಸಿ, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದೆ.


ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರನ್ನೊಳಗೊಂಡ ಪೀಠವು ವಕೀಲ ಘನಶ್ಯಾಮ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.


ಅರ್ಜಿದಾರರು, “ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಲೆಕ್ಕಕ್ಕೆ ಸಿಗದ ಹಣಕ್ಕೆ ಸಂಬಂಧಿಸಿದ ಅಪರಾಧ ಹೊಣೆಗಾರಿಕೆ ಕೊನೆಗೊಳ್ಳುವುದಿಲ್ಲ” ಎಂದು ವಾದಿಸಿದರು.


ಇದಕ್ಕೂ ಮೊದಲು ಇದೇ ರೀತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು ಎಂದು ಪೀಠ ಗಮನಿಸಿತು.

ಅದಕ್ಕೆ ಉಪಾಧ್ಯಾಯ ಅವರು, ಹಿಂದಿನ ಅರ್ಜಿಯನ್ನು ದೂರು ಸಲ್ಲಿಸಿರಲಿಲ್ಲ ಎಂಬ ತಾಂತ್ರಿಕ ಕಾರಣಕ್ಕಾಗಿ ವಜಾಗೊಳಿಸಲಾಗಿತ್ತು. ಆದರೆ ಈ ಬಾರಿ ತಾವು ದೂರು ಸಲ್ಲಿಸಿರುವುದಾಗಿ ತಿಳಿಸಿದರು.


ಆಗ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರು ಅರ್ಜಿದಾರರನ್ನು ಉದ್ದೇಶಿಸಿ,

“ನೀವು ವಕೀಲರು. ಇದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಷ್ಟೇ. ಅಗ್ಗದ ಪ್ರಚಾರಕ್ಕಾಗಿ ಮಾಡುತ್ತಿರುವ ಪ್ರಯತ್ನ. ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ನಮಗೆ ಯಾವುದೇ ಆಸಕ್ತಿ ಇಲ್ಲ. ಅರ್ಜಿ ವಜಾ.”

ಎಂದು ಹೇಳಿದರು.


ಅರ್ಜಿದಾರರು ಮುಂದುವರಿದು, ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರನ್ನು ಸಾರ್ವಜನಿಕ ಸೇವಕ (Public Servant) ಎಂದು ಪರಿಗಣಿಸಲಾಗಿರುವುದರಿಂದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳದಿರಲು ಯಾವುದೇ ಕಾರಣವಿಲ್ಲ ಎಂದು ವಾದಿಸಿದರು. “ಅವರು ಈಗ ನಿವೃತ್ತರಾಗಿದ್ದರೂ ಸಹ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರಿಂದ ಯಾವುದೇ ವಿನಾಯಿತಿ (immunity from prosecution) ಇರುವುದಿಲ್ಲ” ಎಂದು ಅವರು ತಿಳಿಸಿದರು.


ಆದಾಗ್ಯೂ, ಸುಪ್ರೀಂ ಕೋರ್ಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿ ವಜಾಗೊಳಿಸಿತು.


*ಪ್ರಕರಣದ ಹಿನ್ನೆಲೆ*


2025ರ ಮಾರ್ಚ್ 14ರಂದು ಹೋಳಿ ಹಬ್ಬದ ರಾತ್ರಿ ಸುಮಾರು 11:35ಕ್ಕೆ, ಆಗ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಯಶವಂತ್ ವರ್ಮಾ ಅವರ ಲ್ಯೂಟಿಯನ್ಸ್ ದೆಹಲಿಯ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.

ಬೆಂಕಿ ಅವಘಡದ ನಂತರ ಅವರ ನಿವಾಸದಲ್ಲಿ ಸುಟ್ಟುಹೋದ ನೋಟುಗಳ ಕಟ್ಟುಗಳು ಸೇರಿದಂತೆ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ ಎನ್ನಲಾದ ಘಟನೆ ಭಾರಿ ವಿವಾದಕ್ಕೆ ಕಾರಣವಾಯಿತು.


ಇದಾದ ಬಳಿಕ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಸಂಸತ್ತಿನಲ್ಲಿ ಅಪರೂಪದ ಮಹಾಭಿಯೋಗ (impeachment) ಪ್ರಕ್ರಿಯೆ ಆರಂಭವಾಗಿತ್ತು.


ಆದರೆ ಏಪ್ರಿಲ್ 9ರಂದು ನ್ಯಾಯಮೂರ್ತಿ ವರ್ಮಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ತಕ್ಷಣದಿಂದಲೇ ಜಾರಿಗೆ ಬಂದ ಕಾರಣ, ಲೋಕಸಭೆಯಲ್ಲಿ ಅವರ ವಿರುದ್ಧ ಆರಂಭಿಸಲಾಗಿದ್ದ ತೆರವು ಪ್ರಕ್ರಿಯೆ  “ನಿಷ್ಪ್ರಯೋಜಕ” (infructuous)ವಾಯಿತು.


ಸಂಸತ್ತಿನ ಮೂಲಕ ಪದಚ್ಯುತಿಗೊಳಿಸುವ ಸಾಧ್ಯತೆಯನ್ನು ತಪ್ಪಿಸಲು ರಾಜೀನಾಮೆ ಸಲ್ಲಿಸುವುದು ಅವರಿಗೆ ಉಳಿದಿದ್ದ ಏಕೈಕ ಮಾರ್ಗವಾಗಿತ್ತು ಎಂದು ವರದಿಯಾಗಿದೆ. ಲೋಕಸಭೆಯಿಂದ ನೇಮಿಸಲಾದ ತನಿಖಾ ಸಮಿತಿಯ ಮುಂದುವರಿದ ವಿಚಾರಣೆಯಿಂದಲೂ ಅವರು ಹಿಂದೆ ಸರಿದಿದ್ದರು. ನ್ಯಾಯಮೂರ್ತಿ ವರ್ಮಾ ಅವರು 2031ರ ಜನವರಿ 5ರಂದು ನಿವೃತ್ತರಾಗಬೇಕಾಗಿತ್ತು.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu