-->
ಚೆಕ್ ದುರ್ಬಳಕೆ ಪ್ರಕರಣಗಳಲ್ಲಿ ಗಂಭೀರ ಪ್ರಮಾಣದ ಹೆಚ್ಚಳ: ಕರ್ನಾಟಕ ಹೈಕೋರ್ಟ್ ಕಳವಳ

ಚೆಕ್ ದುರ್ಬಳಕೆ ಪ್ರಕರಣಗಳಲ್ಲಿ ಗಂಭೀರ ಪ್ರಮಾಣದ ಹೆಚ್ಚಳ: ಕರ್ನಾಟಕ ಹೈಕೋರ್ಟ್ ಕಳವಳ

ಚೆಕ್ ದುರ್ಬಳಕೆ ಪ್ರಕರಣಗಳಲ್ಲಿ ಗಂಭೀರ ಪ್ರಮಾಣದ ಹೆಚ್ಚಳ: ಕರ್ನಾಟಕ ಹೈಕೋರ್ಟ್ ಕಳವಳ





ಇತ್ತೀಚೆಗೆ ನೀಡಿರುವ ಚೆಕ್‌ನ್ನು ದುರ್ಬಳಕೆ ಮಾಡಿ ಪ್ರಕರಣಗಳನ್ನು ದಾಖಲಿಸುವ ಸಂಖ್ಯೆ ವಿಪರೀತವಾಗಿ ಹೆಚ್ಚಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂದ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.


ಚೆಕ್ ಅಮಾನ್ಯ ಪ್ರಕರಣದ ವಿಚಾರಣೆ ವೇಳೆ ಈ ಅಭಿಪ್ರಾಯಪಟ್ಟ ಅವರು, ಇತ್ತೀಚೆಗೆ ಚೆಕ್‌ಗಳ ದುರ್ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಕೊಲೆ ಸೇರಿ ಇನ್ನಿತರ ಗಂಭೀರ ಸ್ವರೂಪದ ಅಪರಾಧಗಳಿಗೆ ಸಂಬಂಧಿಸಿದ ಕೇಸ್‌ಗಳ ವಿಚಾರಣೆ ಮತ್ತು ಪ್ರಕರಣದ ವಿಲೇವಾರಿಗೆ ಅಡ್ಡಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


"ಚೆಕ್ ದುರ್ಬಳಕೆ ಪ್ರಕರಣಗಳು ಹೆಚ್ಚಾಗಿವೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಕ್ರಿಮಿನಲ್ ಕೇಸುಗಳ ಪೈಕಿ ಸುಮಾರು ಶೇಕಡಾ 38ರಷ್ಟು ಪ್ರಕರಣಗಳು ಚೆಕ್‌ ಅಮಾನ್ಯ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿವೆ" ಎಂದು ನ್ಯಾಯಮೂರ್ತಿ ಶ್ರೀಶಾನಂದ ಹೇಳಿದರು.


ಸಾಮಾನ್ಯವಾಗಿ ಸಾಲ ನೀಡುವವರು ತಾವು ನೀಡುವ ಒಂದು ಸಾಲಕ್ಕೆ ಸಾಲ ಪಡೆದವರಿಂದ 10 ಚೆಕ್ ಸ್ವೀಕರಿಸುತ್ತಾರೆ. 4 ಸಾವಿರ ರೂ. ಸಾಲ ನೀಡಿದರೆ, ಚೆಕ್‌ನಲ್ಲಿ 40 ಸಾವಿರ ರೂ. ಎಂದು ಬರೆಯುತ್ತಾರೆ. ಸಾಲ ಮರುಪಾವತಿ ಮಾಡಿದ್ದರೂ ದುರುದ್ದೇಶದಿಂದಲೇ ಚೆಕ್‌ ಬೌನ್ಸ್‌ ಕೇಸ್‌ ದಾಖಲಿಸುತ್ತಾರೆ. ಇಂತಹ ಸಾಕಷ್ಟು ಪ್ರಕರಣಗಳಿವೆ'' ಎಂದು ಹೇಳಿದರು.


"ತಾವು ಸ್ವೀಕರಿಸಿದ 10 ಚೆಕ್‌ಗಳನ್ನು ಬಳಸಿ ಹತ್ತು ಕಡೆ ಚೆಕ್‌ ಬೌನ್ಸ್ ಕೇಸು ದಾಖಲಿಸುತ್ತಾರೆ. ಒಂದು ಚೆಕ್‌ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯವೊಂದು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿರುತ್ತದೆ. ಆ ಕೇಸ್ ನಲ್ಲಿ ಸಾಲ ಪಡೆದವರು ನ್ಯಾಯಾಲಯಕ್ಕೆ ಹಾಜರಾಗಿ, ಜಾಮೀನು ಪಡೆದ ಹೊತ್ತಿಗೆ ಮತ್ತೊಂದು ಚೆಕ್‌ ಬೌನ್ಸ್ ಕೇಸಿನಲ್ಲಿ ಇನ್ನೊಂದು ಕೋರ್ಟ್ ವಾರೆಂಟ್ ಜಾರಿಗೊಳಿಸುತ್ತದೆ. ಹೀಗೆ ಸಾಲ ಪಡೆದವರು ದಿನಂಪ್ರತಿ ಕೋರ್ಟ್‌ಗೆ ಹಾಜರಾಗುತ್ತಲೇ ಇರುತ್ತಾರೆ. ಆ ಕೇಸುಗಳ ಇತ್ಯರ್ಥವಾಗುವ ವೇಳೆಗೆ ಸಾಲ ಪಡೆದವರ ಪ್ರಾಣ ಹೋಗಿರುತ್ತದೆ'' ಎಂದು ಅವರು ಆತಂಕ ವ್ಯಕ್ತಪಡಿಸಿದರು.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu